
ಪಣಜಿ(ನ.13): ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ತಾನು ಕೊಟ್ಟ ಮಾತಿನಂತೆ #modimasterstrike ಮೂಲಕ ಈಗಾಗಲೇ ಭ್ರಷ್ಟರ ನಿದ್ದೆಗೆಡಿಸಿದ್ದಾರೆ. ಇದೀಗ ತನ್ನ ಮುಂದಿನ ಟಾರ್ಗೆಟ್ ಬೇನಾಮಿ ಆಸ್ತಿ ಹೊಂದಿರುವವರು ಎಂದು ತಿಳಿಸಿರುವ ಮೋದಿ ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದಾರೆ.
ಬೆಳಗಾವಿಯ ಪ್ರತಿಷ್ಠಿತ ಕೆ.ಎಲ್.ಇ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕಾಗಿ ಆಗಮಿಸಿರುವ ಪ್ರಧಾನಿ ಮೋದಿ ಪಣಜಿಯಲ್ಲಿ ಮಾತನಾಡಿ 'ಸ್ವಾತಂತ್ರ್ಯದ ಬಳಿಕದ ಎಲ್ಲಾ ಕಳ್ಳ ಹಣದ ಲೆಕ್ಕವನ್ನು ಹೊರಗೆಳೆಯುತ್ತೇನೆ, ಇದಕ್ಕಾಗಿ ನಾನು ಒಂದು ಲಕ್ಷ ಜನರನ್ನು ನೇಮಿಸಿಕೊಳ್ಳಲು ಸಿದ್ಧ. ಇದು ಎಂಥಾ ಅಪಾಯಕಾರಿ ಕೆಲಸ, ನಾನು ಎಂಥವರನ್ನು ಎದುರು ಹಾಕಿಕೊಂಡಿದ್ದೇನೆ ಎಂಬುವುದೂ ನನಗೆ ತಿಳಿದಿದೆ. ಆದರೆ ಒಮ್ಮೆ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿದರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ' ಎಂದಿದ್ದಾರೆ.
ಇನ್ನು ತನ್ನ ಮುಂದಿನ ನಡೆಯ ಕುರಿತಾಗಿ ಸುಳಿವು ನೀಡಿರುವ ಪ್ರಧಾನಿ ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿರುವವರು ನನ್ನ ಮುಂದಿನ ಟಾರ್ಗೆಟ್ ಎಂದಿದ್ದಾರೆ. ಈಗಾಗಲೇ ಮೋದಿ ಕೊಟ್ಟ ಮಾಸ್ಟರ್ ಸ್ಟ್ರೋಕ್'ನಿಂದ ಹೊರಬರಲಾರದೆ ಪರದಾಡುತ್ತಿರುವವರಲ್ಲಿ ಮೋದಿಯ ಈ ಮಾತು ನಡುಕ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.