ರಾಷ್ಟ್ರ ರಾಜಧಾನಿಯಲ್ಲಿ ಶೀತ ಗಾಳಿ ಎಚ್ಚರಿಕೆ

By sujatha AFirst Published Dec 11, 2017, 9:53 PM IST
Highlights

ರಾಷ್ಟ್ರರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಹೆಚ್ಚು ಶೀತಗಾಳಿ ಬೀಸುವ ಸಾಧ್ಯತೆ ಇದೆ. ಮಳೆಯಾದ ಬಳಿಕ ಇದು ಮೊದಲ ಶೀತಗಾಳಿ ಎನ್ನಲಾಗಿದೆ.  ದಿಲ್ಲಿ ನಿವಾಸಿಗಳು ಸಜ್ಜಾಗಿರಲು ಸೂಚನೆ ನೀಡಲಾಗಿದೆ.

ನವದೆಹಲಿ(ಡಿ.11): ರಾಷ್ಟ್ರರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಹೆಚ್ಚು ಶೀತಗಾಳಿ ಬೀಸುವ ಸಾಧ್ಯತೆ ಇದೆ. ಮಳೆಯಾದ ಬಳಿಕ ಇದು ಮೊದಲ ಶೀತಗಾಳಿ ಎನ್ನಲಾಗಿದೆ.

ಇಲ್ಲಿ ಮಳೆಯಿಂದ  ಅತ್ಯಂತ ಹದಗೆಟ್ಟಿದ್ದ ಮಾಲಿನ್ಯ ಪ್ರಮಾಣವೂ ಕೂಡ ತಗ್ಗಲು ಸಹಕಾರಿಯಾಗಿದೆ.

ಆದರೆ ಇದೀಗ ಶೀತ ಗಾಳಿ ಆರಂಭವಾಗುವ ಸೂಚನೆಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನೀಡಿದ್ದು,  ಹಿಮಾಚಲ ತಪ್ಪಲು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತವಾಗಲಿದೆ ಎಂದು ಹೇಳಿದೆ.

ಆದ್ದರಿಂದ ಮೊದಲ ಶಿತಗಾಳಿಗೆ ದಿಲ್ಲಿ ನಿವಾಸಿಗಳು ಸಜ್ಜಾಗಿರಲು ಸೂಚನೆ ನೀಡಲಾಗಿದೆ.

click me!