ಮಕ್ಕಳು ಶಾಲೆಯಲ್ಲಿದ್ದರೆ ಮುಂಬೈ ಪೋಷಕರು ನಿರಾಳರಾಗಿರುತ್ತಾರೆ

By Suvarna Web DeskFirst Published Dec 11, 2017, 9:23 PM IST
Highlights

ಮುಂಬೈ ಪೋಷಕರು ಶಾಲೆಯಲ್ಲಿ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎನ್ನುವ ಭಾವನೆ ಹೆಚ್ಚು ಹೊಂದಿದ್ದಾರಂತೆ. ದೇಶದ ಬೇರೆ ಪ್ರದೇಶಗಳಿಗೆ ಹೋಲಿಕೆ ಮಾಡಿದಾಗ ಮುಂಬೈ ಪೋಷಕರಲ್ಲಿ ಶಾಲೆಗೆ ಹೋದ ಮಕ್ಕಳ ಬಗ್ಗೆ ಸುರಕ್ಷಿತ ಭಾವ ಹೆಚ್ಚಿದೆಯಂತೆ.

ಮುಂಬೈ(ಡಿ.11): ಪುಟ್ಟ ಮಕ್ಕಳು ಶಾಲೆಗೆ ಹೋಗಿ ಮನೆಗೆ ಮರಳುವವರೆಗೂ ಕೂಡ ಪೋಷಕರ ಮನದಲ್ಲಿ ಆತಂಕ ಎನ್ನುವುದು ಇಂದಿನ ದಿನಮಾನಗಳಲ್ಲಿ ಸಾಮಾನ್ಯವಾಗಿದೆ. ಹಳ್ಳಿ ನಗರಗಳೆನ್ನದೇ ಎಲ್ಲೆಡೆಯೂ ಕೂಡ ನಡೆಯುತ್ತಿರುವ ಅಹಿತಕರ ಘಟನೆಗಳೇ ಇದಕ್ಕೆ ಕಾರಣವಾಗಿದೆ.

ಮುಂಬೈ ಪೋಷಕರು ಶಾಲೆಯಲ್ಲಿ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎನ್ನುವ ಭಾವನೆ ಹೆಚ್ಚು ಹೊಂದಿದ್ದಾರಂತೆ. ದೇಶದ ಬೇರೆ ಪ್ರದೇಶಗಳಿಗೆ ಹೋಲಿಕೆ ಮಾಡಿದಾಗ ಮುಂಬೈ ಪೋಷಕರಲ್ಲಿ ಶಾಲೆಗೆ ಹೋದ ಮಕ್ಕಳ ಬಗ್ಗೆ ಸುರಕ್ಷಿತ ಭಾವ ಹೆಚ್ಚಿದೆಯಂತೆ.

ಶೇ.80ರಷ್ಟು ಮುಂಬೈ ಪೋಷಕರು ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂದು ಭಾವಿಸುತ್ತಾರೆ ಎಂದು  ಚೈಲ್ಡ್ ರೈಟ್ ಎಂಬ ಎನ್’ಜಿಒ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಈ ಸಂಸ್ಥೆಯೂ ಭಾರತದ ಅನೇಕ ನಗರಗಳಲ್ಲಿ 3 ರಿಂದ 14 ವರ್ಷ ವಯಸ್ಸಿನ ಮಕ್ಕಳ  ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿದೆ. ಎಲ್ಲಾ ವರ್ಗದ ಜನರನ್ನೂ ಕೂಡ ಸಂದರ್ಶನ ಮಾಡಲಾಗಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಹೇಳುವ ಪ್ರಕಾರ ಕಳೆದ ದಶಕಗಳಿಗಿಂತ ಈ ದಶಕದಲ್ಲಿ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಿವೆ ಎನ್ನುತ್ತದೆ.

click me!