
ಬೆಂಗಳೂರು [ಜು.30] : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಕಾಫಿ ಡೇ ಮಾಲಿಕ ಸಿದ್ಧಾರ್ಥ್ ನಾಪತ್ತೆಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಸಿದ್ಧಾರ್ಥ್ ಮಂಗಳೂರಿಗೆ ತೆರಳಿ ನೇತ್ರಾವತಿ ತಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ಇದೆ.
ಅವರೊಂದಿಗೆ ತೆರಳಿದ್ದ ಚಾಲಕ ಬಸವರಾಜ್ ಹೇಳುವ ಪ್ರಕಾರ ಫೋನ್ ಕರೆಯಲ್ಲಿದ್ದ ಸಿದ್ಧಾರ್ಥ್ ಮಳೆಯಲ್ಲಿಯೇ ಕಾರಿನಿಂದ ಇಳಿದು ತೆರಳಿದ್ದರು ಎಂದಿದ್ದಾರೆ.
ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!
ಆದರೆ ಅವರ ಕಾಲ್ ಲಿಸ್ಟ್ ಪ್ರಕಾರ ಕಾಫಿ ಡೇ CFO ರಾಮ್ ಮೋಹನ್ ಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರ ಸಿಡಿಆರ್ ಪ್ರಕಾರ ಕೊನೆಯ ಕಾಲ್ ಮಾಡಿ ಮಾತನಾಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
"
ಇದು ತಮ್ಮ ಕೊನೆಯ ದಿನ ಎನ್ನುವಂತೆ ಮಾತನಾಡಿದ ಅವರು ಕಂಪನಿ ವ್ಯವಹಾರಗಳನ್ನು ಸೂಕ್ತ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಹಾಗೂ ಕಾಫಿ ಎಸ್ಟೇಟ್ ಕಡೆ ಗಮನ ಹರಿಸುವಂತೆಯೂ ಸೂಚನೆ ನೀಡಿರಬಹುದು ಎನ್ನಲಾಗಿದೆ.
ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸಂಪೂರ್ಣ ತನಿಖೆಯ ಬಳಿಕವಷ್ಟೇ ಎಲ್ಲದಕ್ಕೂ ಸ್ಪಷ್ಟನೆ ದೊರಕಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.