ಸಿದ್ಧಾರ್ಥ್ ನಾಪತ್ತೆ : ಹುಟ್ಟೂರಲ್ಲಿ ಕಾಫಿ ಡೇ, ಕಂಪನಿಗಳ ವ್ಯವಹಾರ ಸ್ಥಗಿತ

By Web Desk  |  First Published Jul 30, 2019, 10:58 AM IST

ಕಾಫಿ ಡೇ ಮಾಲಿಕ ಸಿದ್ಧಾರ್ಥ್ ನಾಪತ್ತೆ ಹಿನ್ನೆಲೆಯಲ್ಲಿ ವರ ಸ್ವಂತ ಹುಟ್ಟೂರಾದ ಚಿಕ್ಕಮಗಳೂರಿನ ಎಲ್ಲಾ ಕಾಫಿ ಡೇ ಹಾಗೂ ಅವರ ಒಡೆತನದ ಕಂಪನಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 


ಚಿಕ್ಕಮಗಳೂರು [ಜು.30]: ಕಾಫಿ ಡೇ ಮಾಲಿಕ ಸಿದ್ಧಾರ್ಥ್ ನಾಪತ್ತೆ ಹಿನ್ನೆಲೆಯಲ್ಲಿ ಅವರ ತವರು ಜಿಲ್ಲೆಯಾದ ಚಿಕ್ಕಮಗಳೂರಿನ ಎಲ್ಲಾ ಕಾಫಿ ಡೇಗಳ ವ್ಯವಹಾರ ಸ್ಥಗಿತ ಮಾಡಲಾಗಿದೆ. 

ಮಂಗಳೂರಿಗೆ ತೆರಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ತಮ್ಮ ಮಾಲಿಕನ ನಾಪತ್ತೆ ಪ್ರಕರಣ ಕೆಲಸಗಾರರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. 

Tap to resize

Latest Videos

ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!

ಚಿಕ್ಕಮಗಳೂರಿನಲ್ಲಿರುವ ಎಬಿಸಿ ಕಂಪನಿ, ಸೇರಾಯ್ ರೆಸಾರ್ಟ್, ಅಂಬರ್ ವ್ಯಾಲಿ ಶಾಲೆ, ವಿಟಿಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ನೇತ್ರಾವತಿ ತಟದಲ್ಲಿ ಉದ್ಯಮಿ ಸಿದ್ಧಾರ್ಥ ನಿಗೂಢ ನಾಪತ್ತೆ: ಚಾಲಕ ಕೊಟ್ಟ ದೂರಿನಲ್ಲೇನಿದೆ?

ಕೆಲಸಕ್ಕೆ ಆಗಮಿಸಿದ ಸಾವಿರಾರು ಕಾರ್ಮಿಕರನ್ನು ಮಾಲಿಕ ನಾಪತ್ತೆ ಹಿನ್ನೆಲೆಯಲ್ಲಿ ವಾಪಸ್ ಕಳುಹಿಸಲಾಗಿದೆ. ಅಲ್ಲದೇ ಈ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಲ್ಲಿ ತೀವ್ರ ಆತಂಕ ಮನೆಮಾಡಿದ್ದು, ಮಾಲಿಕ ಮತ್ತೆ ಮರಳಿ ಬರಲಿ ಎಂದು ಪ್ರಾರ್ಥಿಸಿದ್ದಾರೆ. 

click me!