ಇಂದಿನಿಂದ ನೀತಿ ಸಂಹಿತೆ ಜಾರಿ; ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂಗೆ ಗೇಟ್’ನಿಂದಲೇ ಭದ್ರತೆ ಕಟ್!

By Suvarna Web DeskFirst Published Mar 27, 2018, 11:37 AM IST
Highlights

ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು  ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಸಿಎಂ ಸಿದ್ದರಾಮಯ್ಯಗೆ  ಚುನಾವಣಾ ನೀತಿ ಸಂಹಿತೆ ಬಿಸಿ ಮುಟ್ಟಿದೆ. 

ಬೆಂಗಳೂರು  (ಮಾ. 27):  ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು  ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಸಿಎಂ ಸಿದ್ದರಾಮಯ್ಯಗೆ  ಚುನಾವಣಾ ನೀತಿ ಸಂಹಿತೆ ಬಿಸಿ ಮುಟ್ಟಿದೆ. 
ಮೆಗಾ ಡೈರಿ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯಗೆ ಡೈರಿ ಗೇಟ್​​​ನಿಂದಲೇ  ಭದ್ರತೆ ಕಡಿತಗೊಳಿಸಲಾಗಿದೆ.  ಚಿಕ್ಕಬಳ್ಳಾಪುರ ತಾಲೂಕಿನ ನಂದಿಕ್ರಾಸ್​ನಲ್ಲಿ ಆಯೋಜಿಸಿದ್ದ  ಮೆಗಾ ಡೈರಿ  ಉದ್ಘಾಟನೆ ಕಾರ್ಯಕ್ರಮ ರದ್ದಾಗಿದೆ. 

ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಎಲ್ಲಾ ಸಚಿವರ ಸರ್ಕಾರಿ ಸೌಲಭ್ಯ ವಾಪಸ್ ಪಡೆಯಲಾಗುತ್ತದೆ.  ಸಿಎಂ ಸೇರಿ ಎಲ್ಲಾ ಸಚಿವರ ಸರ್ಕಾರಿ ಕಾರುಗಳು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.  ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಹಿನ್ನಲೆಯಲ್ಲಿ  ಬೆಳಗ್ಗೆ 11.15ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. 

ಸಿಎಂ ಹಾಗೂ ಸಚಿವರು ಈವರೆಗೂ ಪಡೆಯುತ್ತಿದ್ದ ಸರ್ಕಾರಿ ಸವಲತ್ತುಗಳೆಲ್ಲವೂ ವಾಪಸ್ ಪಡೆಯಲಾಗುತ್ತದೆ. 

click me!