ತೆಂಗಿನ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಇದೆ. ಆದರೆ, ಬೆಣ್ಣೆ ಮತ್ತು ದನದ ಕೊಬ್ಬಿಗಿಂತಲೂ ತೆಂಗಿನ ಎಣ್ಣೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಅಮೆರಿಕದ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್(ಜೂ.18): ತೆಂಗಿನ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಇದೆ. ಆದರೆ, ಬೆಣ್ಣೆ ಮತ್ತು ದನದ ಕೊಬ್ಬಿಗಿಂತಲೂ ತೆಂಗಿನ ಎಣ್ಣೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಅಮೆರಿಕದ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (ಎಎಚ್‌ಎ) ಇತ್ತೀಚೆಗೆ ಪ್ರಕಟಿಸಿರುವ ವರದಿ ಯೊಂದರ ಪ್ರಕಾರ, ತೆಂಗಿನ ಎಣ್ಣೆಯಲ್ಲಿ ಅಧಿಕ ಕೊಬ್ಬಿನ ಅಂಶವಿದೆ. ಅದು ಪ್ರಾಣಿಗಳ ಕೊಬ್ಬು ಮತ್ತು ಬೆಣ್ಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ತೆಂಗಿನ ಎಣ್ಣೆಯ ಸೇವನೆಯಿಂದ ದೇಹ ದಲ್ಲಿ ಕೊಲೆಸ್ಟ್ರಾಲ್ (ಕೊಬ್ಬು) ಜಾಸ್ತಿಯಾಗಿ ಹೃದಯಾಘಾತಕ್ಕೆ ಕಾರಣ ವಾಗಬಹುದು. ಇದರ ಬದಲು ಆಲಿವ್ ಆಯಿಲ್ ಮತ್ತು ಸನ್‌ಫ್ಲಾವರ್ ಆಯಿಲ್ ಅನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸಲಹೆ ನೀಡಿದೆ.
ತೆಂಗಿನ ಎಣ್ಣೆಯಲ್ಲಿ ಶೇ.82ರಷ್ಟುಕೊಬ್ಬಿನ ಅಂಶವಿದ್ದು, ಅದೇ ಬೆಣ್ಣೆಯಲ್ಲಿ ಶೇ.63 ಮತ್ತು ದನದ ಕೊಬ್ಬಿನಲ್ಲಿ ಶೇ.50ರಷ್ಟುಮತ್ತು ಹಂದಿ ಕೊಬ್ಬಿನಲ್ಲಿ ಶೇ.39ರಷ್ಟುಕೊಬ್ಬಿನ ಅಂಶವಿದೆ ಎಂದು ಎಎಚ್‌ಎ ಹೇಳಿದೆ. ಅಲ್ಲದೇ, ತೆಂಗಿನ ಎಣ್ಣೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಜೀರ್ಣಕ್ರಿಯೆ, ರೋಗ ರಕ್ಷಣೆ ಗುಣವಿದೆ ಮತ್ತು ತೂಕ ಇಳಿಸಲು ನೆರವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಇದು ಜನರ ತಪ್ಪು ತಿಳುವಳಿಕೆ. ಜನರು ಕೊಬ್ಬು ರಹಿತ ಎಣ್ಣೆಗಳನ್ನು ಅಡುಗೆಗೆ ಬಳಸಬೇಕು ಎಂದು ಎಎಚ್‌ಎ ವರದಿ ತಿಳಿಸಿದೆ.