ಸಹಶಿಕ್ಷಕರಿಂದ ಹೆಡ್ ಮಾಸ್ಟರ್ ಕೊಲೆ: ಹಣಕ್ಕಾಗಿ ಬಿತ್ತು ಮುಖ್ಯ ಶಿಕ್ಷಕನ ಹೆಣ

Published : Oct 15, 2016, 07:59 AM ISTUpdated : Apr 11, 2018, 12:46 PM IST
ಸಹಶಿಕ್ಷಕರಿಂದ ಹೆಡ್ ಮಾಸ್ಟರ್ ಕೊಲೆ: ಹಣಕ್ಕಾಗಿ ಬಿತ್ತು ಮುಖ್ಯ ಶಿಕ್ಷಕನ ಹೆಣ

ಸಾರಾಂಶ

ಕಳೆದ ಆಕ್ಟೋಬರ್ 7 ರಂದು ನಾಪತ್ತೆಯಾಗಿದ್ದರು, ಆದರೆ ಅಕ್ಟೋಬರ್ 8ರಂದು ಸವಳಂಗ ಸಮೀಪದ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕಾರಿಪುರ ಸಾಲೂರಿನ ಗ್ರಾಮದವರಾದ ಬಸವರಾಜಪ್ಪ ಶಿವಮೊಗ್ಗದ ವನಿತಾ ವಿದ್ಯಾಲಯದ ಮುಖ್ಯಶಿಕ್ಷಕರಾಗಿದ್ದರು. ಅದೇ ಶಾಲೆಯಲ್ಲೇ ಚನ್ನಬಸಪ್ಪ, ಚನ್ನಪ್ಪ ಹಾಗೂ ನಾಗರಾಜಪ್ಪ ಸಹಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು. ಮುಖ್ಯಶಿಕ್ಷಕ ಹಾಗು ಸಹಶಿಕ್ಷಕರ ನಡುವೆ ಎಲ್ ಐ ಸಿ, ಆರ್ ಡಿ ಹಣ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಸಹ ಶಿಕ್ಷಕರು 6 ಆರು ಲಕ್ಷ ರೂಗಳನ್ನು ಬಸವರಾಜಪ್ಪನ ಖಾತೆಗೆ ಜಮಾ ಮಾಡಿದ್ದರು. ಆದರೆ ಬಸವರಾಜಪ್ಪ ಈ ಹಣವನ್ನು ಬಳಕೆ ಮಾಡಿಕೊಂಡಿದ್ದು, ಹಣ ಕೊಡುವಂತೆ ಸಹಶಿಕ್ಷಕರು ಗಲಾಟೆ ಮಾಡಿದ್ದರು. ಅಕ್ಟೋಬರ್ 7ರಂದು  ಶಿಕಾರಿಪುರ ಬ್ಯಾಂಕ್ ನಲ್ಲಿ ಸಾಲ ಬರುವುದಿದೆ ಎಂದು ನಾಲ್ವರು ಬೈಕ್ ಮೇಲೆ ತೆರಳಿತ್ತಿದ್ದರು. ಈ  ಸಂದರ್ಭದಲ್ಲಿ ಬಸವರಾಜಪ್ಪ ಸಾಲದ ವಿಚಾರವಾಗಿ ಸುಳ್ಳು ಹೇಳುತ್ತಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಹಶಿಕ್ಷಕರು ಬಸವರಾಜಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿ ಬಸವರಾಜಪ್ಪನನ್ನ ಮರಕ್ಕೆ ನೇಣು ಹಾಕಿದ ಸಹಶಿಕ್ಷಕರು ಅಲ್ಲಿಂದ ಪರಾರಿಯಾಗಿದ್ದರು.

ದಾವಣಗೆರೆ(ಅ.15): ಅವರೆಲ್ಲಾ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಹಣಕಾಸಿನ ವಿಚಾರದಲ್ಲಿ ಉಂಟಾದ ಗೊಂದಲದಲ್ಲಿ ಮುಖ್ಯಶಿಕ್ಷಕರನ್ನೇ ಕೊಲೆ ಮಾಡಿದ್ದಾರೆ. ಶಿವಮೊಗ್ಗದ ವನಿತಾ ವಿದ್ಯಾಲಯದ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಬಸವರಾಜಪ್ಪ ಕೊಲೆಯಾದ ದುರ್ಧೈವಿ.

ಕಳೆದ ಆಕ್ಟೋಬರ್ 7 ರಂದು ನಾಪತ್ತೆಯಾಗಿದ್ದರು, ಆದರೆ ಅಕ್ಟೋಬರ್ 8ರಂದು ಸವಳಂಗ ಸಮೀಪದ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕಾರಿಪುರ ಸಾಲೂರಿನ ಗ್ರಾಮದವರಾದ ಬಸವರಾಜಪ್ಪ ಶಿವಮೊಗ್ಗದ ವನಿತಾ ವಿದ್ಯಾಲಯದ ಮುಖ್ಯಶಿಕ್ಷಕರಾಗಿದ್ದರು. ಅದೇ ಶಾಲೆಯಲ್ಲೇ ಚನ್ನಬಸಪ್ಪ, ಚನ್ನಪ್ಪ ಹಾಗೂ ನಾಗರಾಜಪ್ಪ ಸಹಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು. ಮುಖ್ಯಶಿಕ್ಷಕ ಹಾಗು ಸಹಶಿಕ್ಷಕರ ನಡುವೆ ಎಲ್ ಐ ಸಿ, ಆರ್ ಡಿ ಹಣ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಸಹ ಶಿಕ್ಷಕರು 6 ಆರು ಲಕ್ಷ ರೂಗಳನ್ನು ಬಸವರಾಜಪ್ಪನ ಖಾತೆಗೆ ಜಮಾ ಮಾಡಿದ್ದರು. ಆದರೆ ಬಸವರಾಜಪ್ಪ ಈ ಹಣವನ್ನು ಬಳಕೆ ಮಾಡಿಕೊಂಡಿದ್ದು, ಹಣ ಕೊಡುವಂತೆ ಸಹಶಿಕ್ಷಕರು ಗಲಾಟೆ ಮಾಡಿದ್ದರು.

ಅಕ್ಟೋಬರ್ 7ರಂದು  ಶಿಕಾರಿಪುರ ಬ್ಯಾಂಕ್ ನಲ್ಲಿ ಸಾಲ ಬರುವುದಿದೆ ಎಂದು ನಾಲ್ವರು ಬೈಕ್ ಮೇಲೆ ತೆರಳಿತ್ತಿದ್ದರು. ಈ  ಸಂದರ್ಭದಲ್ಲಿ ಬಸವರಾಜಪ್ಪ ಸಾಲದ ವಿಚಾರವಾಗಿ ಸುಳ್ಳು ಹೇಳುತ್ತಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಹಶಿಕ್ಷಕರು ಬಸವರಾಜಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿ ಬಸವರಾಜಪ್ಪನನ್ನ ಮರಕ್ಕೆ ನೇಣು ಹಾಕಿದ ಸಹಶಿಕ್ಷಕರು ಅಲ್ಲಿಂದ ಪರಾರಿಯಾಗಿದ್ದರು.

ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಸಹಶಿಕ್ಷಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌