ಮೂರೆ ದಿನದಲ್ಲಿ ಯೋಗಿ 20 ಖಡಕ್ ಆದೇಶ

By Suvarna Web DeskFirst Published Mar 23, 2017, 7:44 PM IST
Highlights

ಯೋಗಿ ಆದಿತ್ಯನಾಥ್ 20 ಮಹತ್ವದ ಕಠಿಣ ಆದೇಶಗಳನ್ನು ಜಾರಿಗೊಳಿಸಿ ಅಚ್ಚರಿ ಮೂಡಿಸಿದ್ದಾರೆ. ಮುಖ್ಯವಾಗಿ ಚುನಾವಣಾ ಭರವಸೆಯಾಗಿದ್ದ ಅಕ್ರಮ ಕಸಾಯಿಖಾನೆಗಳ ನಿಷೇಧ ಆದೇಶ

ಲಖನೌ(ಮಾ.24): ಉತ್ತರ ಪ್ರದೇಶದಲ್ಲಿ ಅಕಾರ ಸ್ವೀಕರಿಸಿದ ಕೇವಲ 72 ಗಂಟೆಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್ 20 ಮಹತ್ವದ ಕಠಿಣ ಆದೇಶಗಳನ್ನು ಜಾರಿಗೊಳಿಸಿ ಅಚ್ಚರಿ ಮೂಡಿಸಿದ್ದಾರೆ. ಮುಖ್ಯವಾಗಿ ಚುನಾವಣಾ ಭರವಸೆಯಾಗಿದ್ದ ಅಕ್ರಮ ಕಸಾಯಿಖಾನೆಗಳ ನಿಷೇಧ ಆದೇಶ, ಗೋಸಾಗಣೆ ತಡೆಗೆ ಕಠಿಣ ಕ್ರಮ, ಸಚಿವರು ಮತ್ತು ಅಕಾರಿಗಳು 15 ದಿನಗಳೊಳಗೆ ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳಲು ಆದೇಶ, ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ‘ರೋಡ್ ರೋಮಿಯೋ ನಿಗ್ರಹ ಪಡೆ’, ಅಧಿಕಾರಿಗಳು ಕಚೇರಿಗಳಲ್ಲಿ ಪಾನ್‌ಮಸಾಲ, ತಂಬಾಕು ಬಳಕೆಗೆ ನಿಷೇಧ, ಕರ್ತವ್ಯ ಲೋಪ ಎಸಗುವ ಪೊಲೀಸರ ಅಮಾನತು, ಸಚಿವರ ಕಾರುಗಳಿಗೆ ಕೆಂಪು ದೀಪ ಬಳಕೆಗೆ ನಿಷೇಧ, ಸರ್ಕಾರಕ್ಕೆ ಇಬ್ಬರು ವಕ್ತಾರರ ನಿಯೋಜನೆ ಸೇರಿದಂತೆ ಪ್ರಮುಖ 20 ಕ್ರಮಗಳನ್ನು ಕೈಗೊಳ್ಳಲಾಗಿದೆ.

click me!