ಸುವರ್ಣ ನ್ಯೂಸ್ ಇಂಪ್ಯಾಕ್ಟ್ :ರಸ್ತೆಯಲ್ಲೇ ಹೆರಿಗೆಗೆ ಸಿಎಂ ಟ್ವೀಟ್, ಕ್ರಮಕ್ಕೆ ಸೂಚನೆ

Published : Oct 22, 2016, 11:31 AM ISTUpdated : Apr 11, 2018, 01:13 PM IST
ಸುವರ್ಣ ನ್ಯೂಸ್ ಇಂಪ್ಯಾಕ್ಟ್ :ರಸ್ತೆಯಲ್ಲೇ ಹೆರಿಗೆಗೆ ಸಿಎಂ ಟ್ವೀಟ್, ಕ್ರಮಕ್ಕೆ ಸೂಚನೆ

ಸಾರಾಂಶ

ಔರಾದ್​​ ಬಸ್​​ ನಿಲ್ದಾಣದತ್ತ ಹೋಗುವಾಗ ಬಸವೇಶ್ವರ ವೃತ್ತದ ನಡು ರಸ್ತೆಯಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಅಮಾನವೀಯ ಘಟನೆಯ ಕುರಿತು ಸಿಎಂ ಬೇಸರ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದರು

ಬೀದರ್​​​​​​​ನಲ್ಲಿ ಅಕ್ಟೋಬರ್​​ 12ರಂದು ಆಸ್ಪತ್ರೆಗೆ ಹೆರಿಗೆಗೆ ಬಂದ ಗರ್ಭಿಣಿಯನ್ನ ವೈದ್ಯರು ಹೊರ ಹಾಕಿದ ಪರಿಣಾಮ ರಸ್ತೆಯಲ್ಲಿ ಹೆರಿಗೆಯಾಗಿತ್ತು. ಆಸ್ಪತ್ರೆಯ ಅವ್ಯವಸ್ಥೆ  ಹಾಗೂ ಅಮಾನವೀಯತೆ ಬಗ್ಗೆ ಅಂದೇ ಸುವರ್ಣ ನ್ಯೂಸ್​​ ವರದಿ ಪ್ರಸಾರ ಮಾಡಿತ್ತು. ಬಳಿಕ ಸಿಎಂ ಸಿದ್ದರಾಮಯ್ಯ ಈ ಕುರಿತು ಟ್ವೀಟರ್​​ನಲ್ಲಿ ಬೆಸರ ವ್ಯಕ್ತಪಡಿಸಿ, ಕ್ರಮಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ.

ಬೀದರ್​ ಜಿಲ್ಲೆಯ ಔರಾದ್​​ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಡೂರು ಗ್ರಾಮದ ಸುರೇಖಾ ಎಂಬುವವರು ಹೆರಿಗೆಗೆ ಬಂದಿದ್ದರು. ಆದರೆ ವೈದ್ಯ ಡಾ. ಶಿಲ್ಪಾ ಸಿಂಧೆ, ಚಿಕಿತ್ಸೆ ನೀಡುವುದನ್ನು ಬಿಟ್ಟು ಬೀದರ್​​​ಗೆ ಹೊಗುವಂತೆ ಹೇಳಿ ಅಮಾನವೀಯವಾಗಿ ಹೊರ ಹಾಕಿದ್ದರು. ದಿಕ್ಕು ಕಾಣದ ಬಡ ಮಹಿಳೆ ಹೊಟ್ಟೆ ನೋವನ್ನಿಟ್ಟುಕೊಂಡು ನಡೆದುಕೊಂಡೇ ಬಂದು ಔರಾದ್​​ ಬಸ್​​ ನಿಲ್ದಾಣದತ್ತ ಹೋಗುವಾಗ ಬಸವೇಶ್ವರ ವೃತ್ತದ ನಡು ರಸ್ತೆಯಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಅಮಾನವೀಯ ಘಟನೆಯ ಕುರಿತು ಸಿಎಂ ಬೇಸರ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದರು. ಆದರೆ ಘಟನೆ ನಡೆದು ಒಂದು ವಾರ ಕಳೆದರೂ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗ್ತಿಲ್ಲ. ಬದಲಾಗಿ ತಪ್ಪಿತಸ್ಥ ಆರೋಗ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಬೀದಿಯಲ್ಲಿ ಹೆರಿಗೆ ಆಗಿಲ್ಲ, ಆಸ್ಪತ್ರೆಯಲ್ಲೇ ಹೆರಿಗೆ ಆಗಿದೆ ಅಂತ ಕಥೆ ಕಟ್ಟುತ್ತಿದ್ದಾರೆ. ಅಲ್ಲದೇ ವೈದ್ಯರ ವಿರುದ್ಧ ಪಿತೂರಿ ಮಾಡಲು ಗರ್ಭಿಣಿಯನ್ನು ನಡು ರಸ್ತೆಯಲ್ಲಿ ಇಟ್ಟು ಫೋಟೋ ತೆಗೆದಿದ್ದಾರೆ ಎಂಬ ಅವಿವೇಕಿತನದ ಹೇಳಿಕೆಗಳನ್ನ ಸಂಗ್ರಹಣೆ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ