ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರದಲ್ಲಿ ಮತ್ತೆ ಸಿಎಂ ಎಂಟ್ರಿ

By Suvarna Web DeskFirst Published Dec 26, 2017, 8:05 AM IST
Highlights

ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ, ಕಾಂಗ್ರೆಸ್​ನಲ್ಲಿ ಉಂಟಾಗಿರೋ ಗೊಂದಲ ನಿವಾರಣೆಗೆ ಸಿಎಂ ಸಿದ್ದರಾಮಯ್ಯ ಎಂಟ್ರಿಯಾಗಿದ್ದಾರೆ.

ಬೆಂಗಳೂರು (ಡಿ.26): ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ, ಕಾಂಗ್ರೆಸ್​ನಲ್ಲಿ ಉಂಟಾಗಿರೋ ಗೊಂದಲ ನಿವಾರಣೆಗೆ ಸಿಎಂ ಸಿದ್ದರಾಮಯ್ಯ ಎಂಟ್ರಿಯಾಗಿದ್ದಾರೆ.

ತಡರಾತ್ರಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅದ್ಯಕ್ಷ, ಶಾಮನೂರು ಶಿವಶಂಕರಪ್ಪನವರನ್ನು ಭೇಟಿಯಾದ ಸಿಎಂ. ಶಾಮನೂರು ಜೊತೆ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಸಾಧನಾ ಸಮಾವೇಶ ಕಾರ್ಯಕ್ಕೆ ಆಗಮಿಸಿ, ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ. ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಶಾಮನೂರು ಶಿವಶಂಕರಪ್ಪನವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪನವರ ಜೊತೆ ವೀರಶೈವ ಲಿಂಗಾಯತ ಧರ್ಮದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಸ್ವತಂತ್ರ ಧರ್ಮದ ವಿಚಾರವಾಗಿ ನಡೆಯುತ್ತಿರುವ ಧರ್ಮ ಸಂಘರ್ಷದಲ್ಲಿ, ಸಿಎಂ ವಿರುದ್ಧ ಕಳೆದ ಕೆಲದಿನಗಳ ಹಿಂದೆ ಶಾಮನೂರು ಶಿವಶಂಕರಪ್ಪ ಬೇಜಾರಾಗಿದ್ದರು. ಈ ಹಿನ್ನಲೆ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ ಸಿಎಂ, ಗೌಪ್ಯವಾಗಿ ಶಾಮನೂರು ಶಿವಶಂಕರಪ್ಪನವರ ಜೊತೆ ಚರ್ಚಿಸಿದ್ದಾರೆ. ಆದರೆ  ಯಾವ ವಿಚಾರಗಳು ಚರ್ಚೆಯಾಗಿವೆ, ಸ್ವತಂತ್ರ ಧರ್ಮದ ವಿಚಾರವಾಗಿ ಶಾಮನೂರು ನಿಲುವು ಏನು, ಸರ್ಕಾರ ರಚನೆ ಮಾಡಿರುವ ಅಲ್ಪಸಂಖ್ಯಾತ ಆಯೋಗ ಸಮಿತಿ ಬಗ್ಗೆ, ಶಾಮನೂರು ಪ್ರತಿಕ್ರಿಯೆ ಏನು ಎಂಬುದು ತಿಳಿಯಬೇಕಿದೆ.

click me!