ಬಿಎಂಟಿಸಿಯಲ್ಲಿ ಪ್ರಯಾಣಿಸಿ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ

By Suvarna Web DeskFirst Published May 16, 2017, 1:17 PM IST
Highlights

ಟೆಂಡರ್ ಶ್ಯೂರ್ ರಸ್ತೆಗಳ ವೀಕ್ಷಣೆ ಮತ್ತು ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಬಿಎಂಟಿಸಿ ಬಸ್’ನಲ್ಲಿ ಪ್ರಯಾಣಿಸಿದರು. ಬಳಿಕ ಕಾಲ್ನಡಿಗೆಯಲ್ಲೇ ಟೆಂಡರ್ ಶ್ಯೂರ್ ರಸ್ತೆಗಳ ಪರಿಶೀಲನೆ ನಡೆಸಿದರು. ಬೆಂಗಳೂರಿನಲ್ಲಿ ಮತ್ತೆ ಮತ್ತೆ ರಸ್ತೆ ಅಗೆಯದಂತೆ ಎಲ್ಲ ವ್ಯವಸ್ಥೆಯಿರುವ ಸುಮಾರು 50 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು (ಮೇ.16): ಬೆಂಗಳೂರಿನಲ್ಲಿ ಮತ್ತೆ ಮತ್ತೆ ರಸ್ತೆ ಅಗೆಯದಂತೆ ಎಲ್ಲ ವ್ಯವಸ್ಥೆಯಿರುವ ಸುಮಾರು 50 ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮೊದಲ ಹಂತದ ಐದು ಟೆಂಡರ್ ಶ್ಯೂರ್ ರಸ್ತೆಗಳ ಲೋಕಾರ್ಪಣೆ ಮಾಡಿದ ಸಿಎಂ ಸಿದ್ಧರಾಮಯ್ಯ,  700 ಕೋಟಿ ವೆಚ್ಚದಲ್ಲಿ 50 ಟೆಂಡರ್ ಶ್ಯೂರ್ ರಸ್ತೆ ಮಾಡಲಾಗುತ್ತಿದೆ ಎಂದಿದ್ದಾರೆ. ಮೊದಲ ಹಂತದಲ್ಲಿ ಪೂರ್ಣಗೊಂಡ ರೆಸಿಡೆನ್ಸಿ, ರಿಚ್ಮಂಡ್ ರಸ್ತೆ, ಕಮಿಷನರೇಟ್ ರಸ್ತೆ, ಮ್ಯೂಸಿಯಂ ರಸ್ತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದ್ದಾರೆ.

Latest Videos

ಈ ಸಂದರ್ಭದಲ್ಲಿ, ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಸಂಪೂರ್ಣಗೊಳಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಪ್ಯಾಕೇಜ್ ಒಂದರಡಿ ಒಟ್ಟು 7 ರಸ್ತೆಗಳನ್ನು 115 ಕೋಟಿ ವೆಚ್ಚದಲ್ಲಿ NAPC ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಎರಡನೇ ಪ್ಯಾಕೇಜ್’ನಲ್ಲಿ ಪೂರ್ಣಗೊಂಡ ನೃಪತುಂಗ ರಸ್ತೆ, ಹಾಗೂ ಕೆ.ಜಿ ರಸ್ತೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಒಟ್ಟು 86.46 ಕೋಟಿ ವೆಚ್ಚಕ್ಕೆ ಐದು ರಸ್ತೆಯ ಕಾಮಗಾರಿಯನ್ನು RNSIL ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.

ಇದರಲ್ಲಿ ಎರಡು ರಸ್ತೆಗಳ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಮುಕ್ತಗೊಳಿಸಿದ ಸಿಎಂ, ಟೆಂಡರ್ ಶ್ಯೂರ್ ರಸ್ತೆಗಳ ವೀಕ್ಷಣೆ ಮತ್ತು ಉದ್ಘಾಟನೆಗೆ ಬಿಎಂಟಿಸಿ ಬಸ್’ನಲ್ಲಿ ಪ್ರಯಾಣಿಸಿದರು. ಬಳಿಕ ಕಾಲ್ನಡಿಗೆಯಲ್ಲೇ ಟೆಂಡರ್ ಶ್ಯೂರ್ ರಸ್ತೆಗಳ ಪರಿಶೀಲನೆ ನಡೆಸಿದರು. ರಸ್ತೆಯೂದ್ದಕ್ಕೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.

ಸಚಿವರುಗಳಾದ ಕೆ.ಜೆ. ಜಾರ್ಜ್, ರಾಮಲಿಂಗ ರೆಡ್ಡಿ, ರೋಷನ್ ಬೇಗ್, ಎಂ ಕೃಷ್ಣಪ್ಪ, ಹಾಗೂ ಮೇಯರ್ ಜಿ ಪದ್ಮಾವತಿ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

click me!