
ಕೊಲಂಬೋ(ಮೇ.16): ಹಾರಾಟ ನಡೆಸುತ್ತಿದ್ದ ವೇಳೆ ಪ್ಯಾರಾಚೂಟ್ ಹೈ ವೋಲ್ಟೇಜ್ ತಂತಿಗಳ ನಡುವೆ ಸಿಲುಕಿ ಕರಕಲಾಗಿ ಹಾರಾಟ ನಡೆಸುತ್ತಿದ್ದ ಶ್ರೀಲಂಕಾದ ಮಿಲಿಟ್ರಿ ಪ್ಯಾರಾಚೂಡಿಸ್ಟ್ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಶ್ರೀಲಂಕಾದ ಕದ್ರುಗ್ಸಾರಾ ಎಂಬ ಪ್ರದೇಶದ ನಡೆದ ಸೈನ್ಯ ತರಬೇತಿ ಕೇಂದ್ರದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮಹಿಳಾ ಸಿಬ್ಬಂದಿ ಪ್ಯಾರಾಚೂಟ್'ನಲ್ಲಿ ಹಾರಾಟ ನಡೆಸಿ, ಕೆಳಗಿಳಿಯುತ್ತಿದ್ದ ಸಂದರ್ಭದಲ್ಲಿ ಪ್ಯಾರಾಚೂಟ್ ಹೈ ವೋಲ್ಟೇಜ್ ತಂತಿಗೆ ಸಿಲುಕಿದೆ. ಮರುಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಭಯಬಿದ್ದ ಮಹಿಳೆ ತನ್ನನ್ನು ಪ್ಯಾರಾಚೂಟ್'ನಿಂದ ಬಿಡಿಸಿಕೊಂಡಿದ್ದಾಳೆ. ಪ್ಯಾರಾಚೂಟ್ ಕಳಚಿಕೊಳ್ಳುತ್ತಿದ್ದಂತೆಯೇ ಕೆಳಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಲು ಅಲ್ಲಿದ್ದ ಸಿಬ್ಬಂದಿ ಧಾವಿಸಿದರಾದರೂ ಬಿದ್ದ ರಭಸಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ನೆರೆದಿದ್ದ ಸಾರ್ವಜನಿಕರು ತಮ್ಮ ಮೊಬೈಲ್'ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಅಂತಹ ಕಠಿಣ ಸಂದರ್ಭದಲ್ಲೂ ದಿಟ್ಟತನ ಮೆರೆದ ಮಹಿಳೆಯನ್ನು ಕಂಡು ನೆರೆದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.