
ಚಿತ್ರದುರ್ಗ(ನ.20): ನನಗೆ ಎರಡು ಮಕ್ಕಳಿದ್ದಾರೆ, ಒಬ್ಬ ಹೇಳದೆ ಮದುವೆ ಮಾಡಿಕೊಂಡ. ಅವನು ಇತ್ತೀಚಿಗೆ ಕಾಲವಾದ. ಇನ್ನೊಬ್ಬ ಮಗ ಮದುವೆಯೇ ಬೇಡ ಎಂದಿದ್ದಾನೆ. ಆದ್ದರಿಂದ ನನಗೆ ಅದ್ದೂರಿ ಮದುವೆಯ ಪ್ರಶ್ನೆ ಇಲ್ಲ. ಹೀಗಂತ ಸಿಎಂ ಸಿದ್ರಾಮಯ್ಯ ಚಿತ್ರದುರ್ಗದಲ್ಲಿ ಹೇಳಿದ್ದಾರೆ. ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 159 ಮಂದಿ ನೂತನ ವಧು-ವರರನ್ನ ಹರಿಸಿದ ಸಿಎಂ, ಅದ್ದೂರಿ ಮದುವೆಯ ವಿಚಾರವಾಗಿ ಮಾಜಿ ಸಚಿವ ಹಾಗೂ ಗಣಿದಣಿ ಜನಾರ್ದನರೆಡ್ಡಿ ಮಗಳ ಮದುವೆ ಬಗ್ಗೆ ಅಸಹ್ಯ ವ್ಯಕ್ತಪಡಿಸಿದರು. ಅಲ್ಲದೆ, ಶ್ರೀಮಂತರು ಈ ರೀತಿ ತಮ್ಮ ಸಂಪತ್ತನ್ನ ಪ್ರದರ್ಶಿಸುವ ಅಗತ್ಯ ಇಲ್ಲ. ಸರಳ ಸಾಮೂಹಿಕ ವಿವಾಹ ಹಾಗೂ ಅಂತರ್ಜಾತಿ ವಿವಾಹ ಹೆಚ್ಚಾಗಿ ನಡೆಯಬೇಕು ಅಂತ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.