ತನ್ವೀರ್ ಸೇಠ್‍ ಆಶ್ಲೀಲ ದೃಶ್ಯಗಳನ್ನು ನೋಡಿಲ್ಲ; ಸಿಎಂ ಸಿದ್ದು

Published : Nov 20, 2016, 07:44 AM ISTUpdated : Apr 11, 2018, 12:46 PM IST
ತನ್ವೀರ್ ಸೇಠ್‍ ಆಶ್ಲೀಲ ದೃಶ್ಯಗಳನ್ನು ನೋಡಿಲ್ಲ; ಸಿಎಂ ಸಿದ್ದು

ಸಾರಾಂಶ

ತನ್ವೀರ್ ಸೇಠ್‍ರಿಂದ ರಾಜೀನಾಮೆ ಪಡೆಯಲ್ಲ. ಉದ್ದೇಶಪೂರ್ವವಾಗಿ ಅವರು ಆಶ್ಲೀಲ ದೃಶ್ಯಗಳನ್ನು ನೋಡಿಲ್ಲವೆಂದು ಮತ್ತೊಮ್ಮೆ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು(ನ.20): ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್‍ರಿಂದ ರಾಜೀನಾಮೆ ಪಡೆಯಲ್ಲ. ಉದ್ದೇಶಪೂರ್ವವಾಗಿ ಅವರು ಆಶ್ಲೀಲ ದೃಶ್ಯಗಳನ್ನು ನೋಡಿಲ್ಲವೆಂದು ಮತ್ತೊಮ್ಮೆ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಈಗಾಗಲೇ ಕ್ರೈಂ ಬ್ರಾಂಚ್ ತನಿಖೆ ನಡೆಸಿದೆ. ಅದರ ವರದಿ ನನಗೆ ತಲುಪಿಲ್ಲ. 

ಬಿಜೆಪಿಯವರು ಉದ್ದೇಶವಾಗಿಯೇ ಅಶ್ಲೀಲ ವಿಡಿಯೋಗಳನ್ನು ನೋಡಿದ್ದಾರೆ. ಆದರೆ ತನ್ವೀರ್ ಸೇಠ್ ಮೊಬೈಲ್ ನೋಡುವಾಗ ಆಕಸ್ಮಿಕವಾಗಿ ನೋಡಿದ್ದಾರೆ. ಹೀಗಾಗಿ ಅವರ ರಾಜೀನಾಮೆ ಪಡೆಯುವುದಿಲ್ಲವೆಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬರುವ ದುರಾಲೋಚನೆಯಿಂದ ರೈತರಿಗೆ ಆಮಿಷವೊಡ್ಡುತ್ತಿದ್ದಾರೆ. ಅವರ ಬಂಡವಾಳ ರಾಜ್ಯದ ಜನತೆಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!
ಬೆಳಗಾವಿ ಅಧಿವೇಶನ ಕೊನೆ ದಿನವೂ ಗದ್ದಲ: ವಿಪಕ್ಷ, ಸಂಘಟನೆಗಳಿಂದ ಪ್ರತಿಭಟನೆ!