ಗೋ ಮಾಂಸ ತಿಂದರೆ ಆಕಾಶ ಬಿದ್ದು ಹೋಗುತ್ತಾ : ಸಿಎಂ

By Suvarna Web DeskFirst Published Mar 12, 2018, 9:11 AM IST
Highlights

ನಾನು ಗೋಮಾಂಸ ತಿನ್ನೋದಿಲ್ಲ, ಒಂದೊಮ್ಮೆ ತಿನ್ನಬೇಕು ಎನಿಸಿದರೆ ತಿನ್ನುತ್ತೇನೆ. ಇದರಿಂದ ಆಕಾಶ ಬಿದ್ದು ಹೋಗುತ್ತಾ? ಇದು ತಪ್ಪಾ?. -ಹೀಗೆ ಗೋಮಾಂಸ ಸೇವನೆ ವಿರೋಧಿಸುವವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.

ಬೆಂಗಳೂರು : ನಾನು ಗೋಮಾಂಸ ತಿನ್ನೋದಿಲ್ಲ, ಒಂದೊಮ್ಮೆ ತಿನ್ನಬೇಕು ಎನಿಸಿದರೆ ತಿನ್ನುತ್ತೇನೆ. ಇದರಿಂದ ಆಕಾಶ ಬಿದ್ದು ಹೋಗುತ್ತಾ? ಇದು ತಪ್ಪಾ?. -ಹೀಗೆ ಗೋಮಾಂಸ ಸೇವನೆ ವಿರೋಧಿಸುವವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.

ದಲಿತ ಸಂಘಟನೆಗಳು ಭಾನುವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ‘ಭಾರತ ಎತ್ತು ಸಾಗುತ್ತಿದೆ?’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು. ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವನೆ ಬೆಳಸಬೇಕು ಎಂಬುದಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಪರಿಚ್ಛೇಧ 53(1) ಹೇಳುತ್ತದೆ. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಇದಕ್ಕೆ ತದ್ವಿರುದ್ಧವಾಗಿ ಹೇಳುತ್ತಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಗೋಮಾಂಸವನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಹೇಳುತ್ತಿದ್ದರು.

ನಾನು ಆಗ ವಿರೋಧ ಪಕ್ಷದ ನಾಯಕನಾಗಿದ್ದೆ. ಗೋಮಾಂಸ ಸೇವನೆ ನಿಷೇಧ ಮಾಡೋಕೆ ಸಾಧ್ಯವಿಲ್ಲ. ಅದು ಆಹಾರ ಪದ್ಧತಿ ಅಂಥ ಹೇಳಿದ್ದೆ. ಅದಕ್ಕೆ ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತಾರೆ ಎಂಬುದಾಗಿ ಎಲ್ಲಡೆ ಹೇಳಿಕೊಂಡು ಬಂದರು ಎಂದು ತಿಳಿಸಿದರು.

ಆದರೆ, ಈವರೆಗೆ ನಾನು ಗೋಮಾಂಸ ತಿಂದಿಲ್ಲ. ಒಂದೊಮ್ಮೆ ತಿನ್ನಬೇಕು ಎನಿಸಿದರೆ ತಿನ್ನುತ್ತೇನೆ. ಅದು ನನ್ನ ಆಹಾರದ ಹಕ್ಕು. ನಾನು ಏನು ತಿನ್ನಬೇಕೋ? ಏನು ತಿನ್ನಬಾರದು? ಎಂದು ಹೇಳುವುದಕ್ಕೆ ಅವ್ಯಾರು? ಇಲ್ಲಿರೋರು ಎಷ್ಟು ಜನ ಗೋಮಾಂಸ ತಿನ್ನುತ್ತಾರೋ ನನಗೆ ಗೊತ್ತಿಲ್ಲ. ತಿನ್ನಬೇಕು  ಅಂದರೆ ತಿನ್ನೋಣ, ಅದರಲ್ಲಿ ಏನಿದೆ?, ತಿಂದರೆ ಏನಾಗುತ್ತೆ? ಇದು ತಪ್ಪಾ? ಇದರಿಂದ ಆಕಾಶ ಬಿದ್ದು ಹೋಗುತ್ತಾ ಎಂದು ಪ್ರಶ್ನಿಸಿದರು.

click me!