‘ಪಂಜಾಬ್ ಬ್ಯಾಂಕ್ ಬಹುಕೋಟಿ ಹಗರಣಕ್ಕೆ ಇಂದಿರಾ ಗಾಂಧಿ ಕಾರಣರೇ?’ ಮೋದಿಗೆ ಸಿದ್ದರಾಮಯ್ಯ ಟಾಂಗ್

Published : Feb 21, 2018, 02:16 PM ISTUpdated : Apr 11, 2018, 12:38 PM IST
‘ಪಂಜಾಬ್ ಬ್ಯಾಂಕ್ ಬಹುಕೋಟಿ ಹಗರಣಕ್ಕೆ ಇಂದಿರಾ ಗಾಂಧಿ ಕಾರಣರೇ?’ ಮೋದಿಗೆ ಸಿದ್ದರಾಮಯ್ಯ ಟಾಂಗ್

ಸಾರಾಂಶ

ತಮ್ಮ  ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಮಾಡಿರುವ ಆರೋಪಗಳಿಗೆ, ಸಿಎಂ ಸಿದ್ದರಾಮಯ್ಯ ಟ್ವಿಟರ್’ನಲ್ಲಿ ಕಾರ್ಟೂನ್’ಗಳ ಮೂಲಕ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ತಮ್ಮ  ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಮಾಡಿರುವ ಆರೋಪಗಳಿಗೆ, ಸಿಎಂ ಸಿದ್ದರಾಮಯ್ಯ ಟ್ವಿಟರ್’ನಲ್ಲಿ ಕಾರ್ಟೂನ್’ಗಳ ಮೂಲಕ ತಿರುಗೇಟು ನೀಡಿದ್ದಾರೆ.

ಪಿಎನ್’ಬಿ ಹಗರಣಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲ್ಲಿ ಬ್ಯಾಂಕ್ ಹಾಗೂ ಲೆಕ್ಕಪರಿಶೋಧಕರನ್ನು ದೂರುತ್ತಿದ್ದಾರೆ. ಪ್ರಧಾನಿ ಮೌನಿಯಾಗಿದ್ದಾರೆ. ಬಹುಷ: ಹಗರಣಕ್ಕೆ, ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ಇಂದಿರಾ ಗಾಂಧಿ ಅಥವಾ ಪಿಎನ್’ಬಿಯನ್ನು ಸ್ಥಾಪಿಸಿದ ಲಾಲ ಲಜಪತ್ ರಾಯ್ ಅವರನ್ನು ಹೊಣೆಗಾರರನ್ನಾಗಿಸುವ ಬಗ್ಗೆ ಆಲೋಚನೆ ಮಾಡುತ್ತಿರಬಹುದು, ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಒಟ್ಟಾರೆಯಾಗಿ ಬೇರೆಯವರನ್ನು ದೂರುವುದು ಅವರ ಮಂತ್ರವಾಗಿದೆಯೆಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.   

ನಿನ್ನೆ ಪಿಎನ್’ಬಿ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯನ್ನು ಹೀಗೆ ಟೀಕಿಸಿದ್ದರು.

ನೋಟು ಅಮಾನ್ಯಮಾಡುವ ಮೂಲಕ ದೇಶದ ಜನತೆ ಸರತಿಯಲ್ಲಿ ನಿಂತು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಜಮೆ ಮಾಡುವಂತೆ ಮಾಡಿದಿರಿ. ಇದೀಗ ಜನರ ರೂ.12000 ಕೋಟಿ ಹಣದೊಂದಿಗೆ ನೀರವ್ ಮೋದಿ ಪರಾರಿಯಾಗುವಂತೆ ಮಾಡಿದಿರಿ, ಎಂದು ಟೀಕಿಸಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಗಂಭೀರ
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್