ಡಿ.13ರಿಂದ ಸಿಎಂ ಸಿದ್ದರಾಮಯ್ಯ ಸಾಧನೆಯ ಸಂಭ್ರಮ

Published : Dec 03, 2017, 09:18 AM ISTUpdated : Apr 11, 2018, 12:46 PM IST
ಡಿ.13ರಿಂದ ಸಿಎಂ ಸಿದ್ದರಾಮಯ್ಯ ಸಾಧನೆಯ ಸಂಭ್ರಮ

ಸಾರಾಂಶ

ಹೊಸ ಯಾತ್ರೆ ಬೀದರ್‌ನಿಂದ ಬೆಂಗಳೂರಿಗೆ ಪ್ರಚಾರ ಯಾತ್ರೆ ಹೊಸ ಯಾತ್ರೆ ಬೀದರ್‌ನಿಂದ ಬೆಂಗಳೂರಿಗೆ ಪ್ರಚಾರ ಯಾ 30 ಜಿಲ್ಲೆಗಳ 100 ಅಸೆಂಬ್ಲಿ ಕ್ಷೇತ್ರಗಳಲ್ಲಿ 93 ಪ್ರಚಾರ ಭಾಷಣ

ಬೆಂಗಳೂರು: ಇನ್ನೀಗ ಚುನಾವಣಾ ಪ್ರಚಾರ ಪರ್ವ. ಬಿಜೆಪಿ, ಜೆಡಿಎಸ್ ನಡೆಸಿರುವ ಚುನಾವಣಾ ಪ್ರಚಾರಕ್ಕೆ ಸಂವಾದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 13ರಿಂದ ಆರಂಭಿಸಲಿರುವ ಚುನಾವಣಾ ಪ್ರಚಾರ ಯಾತ್ರೆಗೆ ರೋಡ್ ಮ್ಯಾಪ್ ಇದೀಗ ಸಿದ್ಧವಾಗಿದೆ. ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ನಡೆಯಲಿರುವ ಈ ಚುನಾವಣಾ ಪ್ರಚಾರ ಪ್ರವಾಸಕ್ಕೆ ಸಿದ್ದರಾಮಯ್ಯ ಅವರ ಚಿಂತಕರ ಚಾವಡಿ ಇಡಲು ಸಜ್ಜಾಗಿರುವ ಹೆಸರು ‘ಸಾಧನೆಯ ಸಂಭ್ರಮ’.

ಸರ್ಕಾರದಿಂದ ಅನುಮೋದನೆಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೆಪದಲ್ಲಿ ಇಡೀ ರಾಜ್ಯವನ್ನು ಒಂದು ಸುತ್ತು ಸುತ್ತಲು ಸಜ್ಜಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಜನಪರ ಕಾರ್ಯಗಳೆಂಬ ‘ಕೂಲಿ ಕೆಲಸ’ಕ್ಕೆ ಮುಂದಿನ ಚುನಾವಣೆಯಲ್ಲಿ ‘ಕೂಲಿ (ಮತ) ಕೊಡಿ’ ಎಂದು ಕೇಳಲು ಅಣಿಯಾಗಿದ್ದಾರೆ.

ಇದಕ್ಕಾಗಿ ಬರೋಬ್ಬರಿ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪ್ರವಾಸ ಕೈಗೊಂಡು, 93 ಪ್ರಚಾರ ಭಾಷಣ ನಡೆಸಲಿದ್ದಾರೆ. ‘ಡಿ.13ರಂದು ಬೆಳಗ್ಗೆ 10.30ಕ್ಕೆ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಈ ಸಾಧನೆಯ ಸಂಭ್ರಮ ಯಾತ್ರೆಗೆ ಅದ್ದೂರಿ ಚಾಲನೆ ದೊರೆಯಲಿದೆ.

ಅನಂತರ ಮೂವತ್ತು ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರು ಇರುವ ಸುಮಾರು 100 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ದಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಮಾರಂಭಗಳನ್ನು ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಕೆಲಸಕ್ಕೆ ಕೂಲಿ ಕೇಳಲಿದ್ದಾರೆ. ಬಹುತೇಕ ರಸ್ತೆ ಮಾರ್ಗ (ಕಾರು) ಹಾಗೂ ಹೆಲಿಕಾಪ್ಟರ್ ಮೂಲಕ ನಡೆಯಲಿರುವ ಈ ಯಾತ್ರೆಯ ಅವಧಿಯಲ್ಲಿ ಹೆಚ್ಚು ಎಂದರೆ ಎರಡರಿಂದ ಮೂರು ಬಾರಿ (ಸಚಿವ ಸಂಪುಟ ಸಭೆಗಾಗಿ) ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.

ಇದರ ಹೊರತಾಗಿ ಸಂಪೂರ್ಣವಾಗಿ ಅವರು ಜಿಲ್ಲಾ ಪ್ರವಾಸದಲ್ಲೇ ನಿರತರಾಗಿರುತ್ತಾರೆ ಮತ್ತು ಮೂವತ್ತು ದಿನಗಳ ಈ ಯಾತ್ರೆಯ ವೇಳೆ 93 ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ’ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. ಈ ಯಾತ್ರೆಗಾಗಿ ಸಕಲ ಸಿದ್ಧತೆ ಕೈಗೊಳ್ಳುವಂತೆ ಈಗಾಗಲೇ ಮುಖ್ಯಮಂತ್ರಿ ಕಚೇರಿಯಿಂದ ರಾಜ್ಯದ 10 ಜಿಲ್ಲಾಡಳಿತಕ್ಕೆ ನಿರ್ದೇಶನ ರವಾನೆಯಾಗಿದೆ.

2 ತಾಸಿನ ಕಾರ್ಯಕ್ರಮ-3 ಮಂದಿ ಭಾಷಣ!: ಈ ಪ್ರವಾಸದ ವೇಳೆ ಪ್ರತಿ ಜಿಲ್ಲೆಯಲ್ಲಿ ನಿತ್ಯ ಮೂರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವ ಗುರಿಯನ್ನು ಹೊಂದಲಾಗಿದೆ. ಪ್ರತಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಸರ್ಕಾರದ ಯೋಜನೆಗಳ ಲಾಭಪಡೆದರು ಸೇರಿದಂತೆ ಐದರಿಂದ ಹತ್ತು ಸಾವಿರ ಸಾರ್ವಜನಿಕರನ್ನು ಸೇರಿಸುವ ಗುರಿ ಹೊಂದಲಾಗಿದೆ.

ಪ್ರತಿ ಕಾರ್ಯಕ್ರಮವು ಕನಿಷ್ಠ ಎರಡು ತಾಸಿನಿಂದ ಗರಿಷ್ಠ ಮೂರು ತಾಸು ಮಾತ್ರ ಇರಲಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣ. ಇದರ ಹೊರತಾಗಿ ಮಾತನಾಡಲು ಅವಕಾಶವಿರುವುದು ಇಬ್ಬರಿಗೆ ಮಾತ್ರ. ಕುತೂಹಲಕಾರಿ ಸಂಗತಿಯೆಂದರೆ, ಇದು ಸಂಪೂರ್ಣವಾಗಿ ಸರ್ಕಾರಿ ಕಾರ್ಯಕ್ರಮ. ಆಯೋಜಕರು ಬಹುತೇಕ ಸರ್ಕಾರಿ ಅಧಿಕಾರಿಗಳು. ಹೀಗಾಗಿ ಪಕ್ಷದ ಯಾವೊಬ್ಬ ನಾಯಕರೂ ಹಾಜರಿರುವುದಿಲ್ಲ.

ಮೂರರ ಪೈಕಿ ಯಾವ ಹೆಸರು ಹಿತ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಮೊದಲ ಹಂತಹ ಪರೋಕ್ಷ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಸಿಎಂ ಚಿಂತಕರ ಚಾವಡಿ ಮೂರು ಹೆಸರುಗಳನ್ನು ಅಂತಿಮಗೊಳಿಸಿದೆ. ಅವು- ಸಾಧನೆಯ ಸಂಭ್ರಮ, ಸಾಧನೆಯ ಸಾಕಾರ ಹಾಗೂ ಸಾಧನಾ ಪರ್ವ. ಈ ಪೈಕಿ ಸಾಧನಾ ಪರ್ವ ಹೆಸರಿಗೆ ಜೆಡಿಎಸ್‌ನ ಕುಮಾರಪರ್ವ ಅಡ್ಡಿಯಾಗಿದೆ. ಜೆಡಿಎಸ್ ಈಗಾಗಲೇ ತನ್ನ ಕಾರ್ಯಕ್ರಮಕ್ಕೆ ಪರ್ವ ಹೆಸರು ಇಟ್ಟಿರುವುದರಿಂದ ಅದನ್ನು ಬಳಸುವುದು ಬೇಡ ಎಂಬ ಚಿಂತನೆಯಿದೆ. ಹೀಗಾಗಿ ಸಾಧನೆಯ ಸಾಕಾರ ಹಾಗೂ ಸಾಧನೆಯ ಸಂಭ್ರಮ ಹೆಸರುಗಳ ಪೈಕಿ ಒಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಮಾಡಬೇಕಿದೆ. ಮೂಲಗಳ ಪ್ರಕಾರ ಬಹುತೇಕ ಸಾಧನೆಯ ಸಂಭ್ರಮ ಹೆಸರೇ ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!