ಸಿಎಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅವರಿಗೆ ಗೊತ್ತಿರಲಿಲ್ಲ : ಹಳೆಯ ಸುಖ,ದುಃಖ ಬಿಚ್ಚಿಟ್ಟ ಸಿದ್ದರಾಮಯ್ಯ

Published : Jun 26, 2017, 04:59 PM ISTUpdated : Apr 11, 2018, 12:56 PM IST
ಸಿಎಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅವರಿಗೆ ಗೊತ್ತಿರಲಿಲ್ಲ : ಹಳೆಯ ಸುಖ,ದುಃಖ ಬಿಚ್ಚಿಟ್ಟ ಸಿದ್ದರಾಮಯ್ಯ

ಸಾರಾಂಶ

ಮೊದಲಿಗೆ ತಮ್ಮ ಬಾಲ್ಯ ಸ್ನೇಹಿತರ ಜೊತೆ ತಮಟೆ ಬಡಿದಿದ್ದು ವಿಶೇಷವಾಗಿತ್ತು. ಬಾಲ್ಯದ ದಿನಗಳಲ್ಲಿ ತಾವು ಸಮಾಜದಲ್ಲಿ ಕಂಡ ಅಸಮಾನತೆ, ಖುದ್ದು ಅನುಭವಿಸಿದ ನೋವನ್ನ ಹಂಚಿಕೊಂಡರು. ತಾವು LLB ಓದುತ್ತಿದ್ದ ಸಮಯದಲ್ಲಿ ಸ್ನೇಹಿತ ತಂದುಕೊಟ್ಟ ಪ್ರಶ್ನೆಪತ್ರಿಕೆಯ ಪ್ರಸಂಗವನ್ನ ಖುದ್ದು ಸಿಎಂ ವೀಕೆಂಡ್ ವಿಥ್ ರಮೇಶ್ ವೇದಿಕೆಯಲ್ಲಿ ಬಿಚ್ಚಿಟ್ಟರು. ಸಿಎಂ ಗಾದಿಗೇರಿದ ತಕ್ಷಣವೇ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರು. ಅಷ್ಟಕ್ಕೂ  ಅನ್ನಭಾಗ್ಯ ಯೋಜನೆ ಬಗ್ಗೆ ಯಾಕಿಷ್ಟು ಕಾಳಜಿ ವಹಿಸಿ ತಂದ್ರು ಅನ್ನೋದಕ್ಕೆ ಕಾರಣ ಬಡವರ ಮೇಲಿನ ಕಾಳಜಿ.

ಬೆಂಗಳೂರು(ಜೂ.26): ವೀಕೆಂಡ್ ವಿಥ್ ರಮೇಶ್. ಜೀ ವಾಹಿನಿಯಲ್ಲಿ ಬರುವ ಜನಪ್ರಿಯ ಕಾರ್ಯಕ್ರಮ. ಇದರಲ್ಲಿ ಈ ವಾರದ ಅತಿಥಿಯಾಗಿ ಭಾಗಿಯಾಗಿದ್ದವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ. ತನ್ನ ಬಾಲ್ಯಾವಸ್ಥೆ, ಹುಡುಗಾಟದ ದಿನಗಳು, ಹೋರಾಟದ ದಿನಗಳನ್ನ ಮೆಲುಕು ಹಾಕಿ, ಯಾರಿಗೂ ಗೊತ್ತಿರದ ಹಲವು ವಿಷಯಗಳನ್ನ ಬಿಚ್ಚಿಟ್ಟಿದ್ದಾರೆ.

ಮೊದಲಿಗೆ ತಮ್ಮ ಬಾಲ್ಯ ಸ್ನೇಹಿತರ ಜೊತೆ ತಮಟೆ ಬಡಿದಿದ್ದು ವಿಶೇಷವಾಗಿತ್ತು. ಬಾಲ್ಯದ ದಿನಗಳಲ್ಲಿ ತಾವು ಸಮಾಜದಲ್ಲಿ ಕಂಡ ಅಸಮಾನತೆ, ಖುದ್ದು ಅನುಭವಿಸಿದ ನೋವನ್ನ ಹಂಚಿಕೊಂಡರು. ತಾವು LLB ಓದುತ್ತಿದ್ದ ಸಮಯದಲ್ಲಿ ಸ್ನೇಹಿತ ತಂದುಕೊಟ್ಟ ಪ್ರಶ್ನೆಪತ್ರಿಕೆಯ ಪ್ರಸಂಗವನ್ನ ಖುದ್ದು ಸಿಎಂ ವೀಕೆಂಡ್ ವಿಥ್ ರಮೇಶ್ ವೇದಿಕೆಯಲ್ಲಿ ಬಿಚ್ಚಿಟ್ಟರು. ಸಿಎಂ ಗಾದಿಗೇರಿದ ತಕ್ಷಣವೇ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರು. ಅಷ್ಟಕ್ಕೂ  ಅನ್ನಭಾಗ್ಯ ಯೋಜನೆ ಬಗ್ಗೆ ಯಾಕಿಷ್ಟು ಕಾಳಜಿ ವಹಿಸಿ ತಂದ್ರು ಅನ್ನೋದಕ್ಕೆ ಕಾರಣ ಬಡವರ ಮೇಲಿನ ಕಾಳಜಿ.

ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು

ಸಿಎಂ ಹಳೆಯ ಸಿನಿಮಾವೊಂದರಲ್ಲಿ ಆ್ಯಕ್ಟ್ ಮಾಡಿದ್ದಾರೆಂಬುದು ರಿವೀಲ್ ಆಗಿದ್ದು ಇದೇ ವೇದಿಕೆಯಲ್ಲಿ. ನಟಿಸಿದ್ದು ಅವರಿಗೆ ಗೊತ್ತಿರಲಿಲ್ಲ. ಸಿದ್ದರಾಮಯ್ಯನವರ ರಾಜಕಾರಣದ ಹಾದಿಯೇ ಒಂದು ರೋಚಕ. ಅದರ ಆರಂಭ ಆಗಿದ್ದು ಚುನಾವಣೆ ಸೋಲಿನಿಂದಲೇ ಇದನ್ನ ಸಿದ್ದರಾಮಯ್ಯನವರು  ಮೆಲುಕು ಹಾಕಿದರು. ಇಲ್ಲಿ ಏಳು ಬೀಳುಗಳೇ ಜಾಸ್ತಿ. ಇದು ಸಿದ್ದರಾಮಯ್ಯನವರಿಗೂ ಅನುಭವವಾಗಿದೆ. ತಮ್ಮ 1999ರ ಚುನಾವಣಾ ಸೋಲಿನ ಕುರಿತು ಸಿಎಂ ಹೇಳಿದ್ದು ಹೀಗೆ.

ಇನ್ನು, ಸಿದ್ದರಾಮಯ್ಯನವರ ಮತ್ತೊಂದು ಸಾಧನೆ ಎಂದರೆ 12 ಬಾರಿ ರಾಜ್ಯದ ಬಜೆಟ್ ಮಂಡಿಸಿದ ಹೆಗ್ಗಳಿಕೆ ಅವರದ್ದು, ಆದರೆ, ಇದಕ್ಕೂ ಮೊದಲು ಮಾದ್ಯಮಗಳ ವರದಿ ಹಾಗೂ ಕೆಲವರ ಹಿಯಾಳಿಕೆಯನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ಬಗೆಯನ್ನ ಸಿಎಂ ನೆನಪಿಸಿಕೊಂಡ್ರು.

ಹೆಚ್ಚು ಬಾರಿ ಬಜೆಟ್ ಮಂಡನೆ

ರಾಜ್ಯದಲ್ಲಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ಖ್ಯಾತಿ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. 1996ರ ನಂತರ ಸಿದ್ದರಾಮಯ್ಯನವರಿಗೆ ಒಂದು ಸುವರ್ಣವಕಾಶ ಒದಗಿ ಬಂದಿತ್ತು. ಅದು ಕೂಡ ಸಿಎಂ ಆಗುವ ಅವಕಾಶ. ಅದು ಹೇಗೆ ಕೈತಪ್ಪಿತು. ಅದನ್ನು ಬಹಿರಂಗ ಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಸಮಾವೇಶ ಮತ್ತು ಕಾಂಗ್ರೆಸ್ ರಾಜಕೀಯ ಪ್ರವೇಶ ಅವರ ರಾಜಕೀಯ ಜೀವನಕ್ಕೆ ಒಂದು ಹೊಸ ದಿಕ್ಕು ತೋರಿಸಿವೆ. ಸಿದ್ದರಾಮಯ್ಯ ಅವರ ಬಹುದೊಡ್ಡ ಕನಸು ಈಡೇರಿದ್ದು, 2013ರ ಚುನಾವಣೆ ಗೆಲುವಿನ ನಂತರ. ಅದು ಮುಖ್ಯಮಂತ್ರಿಯಾಗುವ ಕನಸು. ಈ ಬಗ್ಗೆ ಅವರ ನೆನಪನ್ನ ಮೆಲುಕು ಹಾಕಿಸಿದ್ದು ವೀಕೆಂಡ್ ವಿಥ್ ರಮೇಶ್ ವೇದಿಕೆ.

ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ತಮ್ಮ ಕುಟುಂಬ ಬಗ್ಗೆ... ಈ ವೇಳೆ ಅಗಲಿದ ತಮ್ಮ ಮಗ ರಾಕೇಶ್ ಅವರನ್ನ ನೆನೆದು ವೇದಿಕೆಯಲ್ಲೇ ಕಣ್ಣೀರಿಟ್ಟರು. ಇದೇ ವೇಳೆ ತಮ್ಮ ಮೊಮ್ಮಕ್ಕಳ ಜೊತೆ ತೆರಳಿ ಬಾಹುಬಲಿ ಸಿನಿಮಾ ವೀಕ್ಷಿಸಿದ ಸ್ಟೋರಿಯನ್ನೂ ಹೇಳಿದರು.

ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!