ಕಲಾ ಮಂದಿರದೊಳಗೆ ಗೋಮಾಂಸ ಸೇವಿಸಿದ್ದಾರೆಂದು ಗೋಮೂತ್ರ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರು

By Suvarna Web DeskFirst Published Jun 26, 2017, 4:52 PM IST
Highlights

ಸಂಘಟನೆಯೊಂದರ ಕೆಲವು ಸದಸ್ಯರು ನಿನ್ನೆ ಇಲ್ಲಿನ ಸರ್ಕಾರ ಕಟ್ಟಡ ಕಲಾ ಮಂದಿರದಲ್ಲಿ ಗೋಮಾಂಸ ಸೇವಿಸಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಇಂದು ಕಟ್ಟಡಕ್ಕೆ ಗೋಮೂತ್ರ ಸಿಂಪಡಿಸಿರುವ ಮಜವಾದ ಘಟನೆ ನಡೆದಿದೆ.

ಮೈಸೂರು (ಜೂ.26): ಸಂಘಟನೆಯೊಂದರ ಕೆಲವು ಸದಸ್ಯರು ನಿನ್ನೆ ಇಲ್ಲಿನ ಸರ್ಕಾರ ಕಟ್ಟಡ ಕಲಾ ಮಂದಿರದಲ್ಲಿ ಗೋಮಾಂಸ ಸೇವಿಸಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಇಂದು ಕಟ್ಟಡಕ್ಕೆ ಗೋಮೂತ್ರ ಸಿಂಪಡಿಸಿರುವ ಮಜವಾದ ಘಟನೆ ನಡೆದಿದೆ.

ಚಾರ್ವಿಕ ಎನ್ನುವ ಸಂಘಟನೆ ಆಹಾರ ಅಭ್ಯಾಸದ ಬಗ್ಗೆ ಮೂರು ದಿನಗಳ ಸೆಮಿನಾರನ್ನು ಆಯೋಜಿಸಿತ್ತು. ಚಿಂತಕ ಭಗವಾನ್ ಕೂಡಾ ಇದರಲ್ಲಿ ಭಾಗವಹಿಸಿದ್ದರು. ಕೊನೆಯ ದಿನ ಉಳಿದ ಸದಸ್ಯರುಗಳೊಂದಿಗೆ ಸೇರಿ ಮಾಂಸವನ್ನು ಸೇವಿಸಿದ್ದಾರೆ ಎನ್ನಲಾಗಿದೆ. ಇವರು ಸೇವಿಸಿದ್ದು ಮಾಂಸವಲ್ಲ ಬದಲಿಗೆ ಗೋಮಾಂಸವೆಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಲಾ ಮಂದಿರದೊಳಗೆ ಆಹಾರವನ್ನು ಸೇವಿಸುವಂತಿಲ್ಲ. ಅದಾಗ್ಯೂ ಸೇವಿಸಿದ ಸಂಘಟನೆಗೆ ಜಿಲ್ಲಾಧಿಕಾರಿ ನೊಟೀಸ್ ನೀಡಿದೆ. ಸಂಘಟನೆ ಕಾರ್ಯಕ್ರಮ ಆಯೋಜಿಸುವುದಕ್ಕೂ ಮುನ್ನ ಇಟ್ಟಿದ್ದ 5 ಸಾವಿರ ರೂ. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಕಲಾ ಮಂದಿರದೊಳಗೆ ಮಾಂಸ ಸೇವಿಸಿದ್ದಕ್ಕಾಗಿ ನೊಟೀಸ್ ನೀಡಲಾಗಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಜೊತೆಗೆ ಅನುಮತಿಯನ್ನು ತೆಗೆದುಕೊಳ್ಳಬೇಕು. ಸೆಮಿನಾರ್ ನಡೆಸಲು ಅನುಮತಿಯನ್ನು ಪಡೆದಿದ್ದಾರೆಯೇ ವಿನಃ ಆಹಾರ ಸೇವಿಸುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ ಎಂದು ಜಿಲ್ಲಾಧಿಕಾರಿ ರಣದೀಪ್ ಡಿ ಹೇಳಿದ್ದಾರೆ.

 

click me!