ಕನ್ನಡಿಗರ ಅವಹೇಳನ: ಗೋವಾ ಸಚಿವನಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

By Suvarna Web DeskFirst Published Jan 14, 2018, 4:14 PM IST
Highlights
  • ಕನ್ನಡಿಗರನ್ನು ಹರಾಮಿಗಳೆಂದಿದ್ದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್
  • ನಮಗೆ ಗೋವಾ ಜನರ ವಿರುದ್ಧ ಕೋಪವಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡಿಗರನ್ನು ‘ಹರಾಮಿ’ಗಳೆಂದ  ಗೋವಾ ಸಚಿವನಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಗೋವಾ ಬಿಜೆಪಿ ಸಚಿವನ ಹೇಳಿಕೆ ಖಂಡನೀಯ. ಆದರೆ ನಮಗೆ ಗೋವಾ ಜನರ ವಿರುದ್ಧ ಕೋಪವಿಲ್ಲ. ನಮ್ಮ ಜನರಿಗೆ ಕುಡಿಯಲು ಮಹದಾಯಿ ನೀರಿಗಾಗಿ ನಮ್ಮ  ಪ್ರಯತ್ನಗಳು ಮುಂದುವರಿಯುತ್ತದೆ, ಎಂದು ಸಿಎಂ ಹೇಳಿದ್ದಾರೆ.

The abusive words used against by Irrigation Minister from Goa are reprehensible to say the least. However, we hold no grudge against the people of Goa. We will continue to strive to secure drinking water from for our people.

— Siddaramaiah (@siddaramaiah)

ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹರಿಹಾಯ್ದಿರುವ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್, ಶನಿವಾರ ಕನ್ನಡಿಗರನ್ನು ‘ಹರಾಮಿ’ಗಳೆಂದು ಕರೆದಿದ್ದಾರೆ. ಬಳಿಕ ತನ್ನ ತಪ್ಪಿನ ಅರಿವಾದಕ್ಷಣವೇ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಉತ್ತರ ಕರ್ನಾಟಕದ ಕಂಕುಂಬಿ ಪ್ರದೇಶಲ್ಲಿ ಮಹದಾಯಿ ನೀರು ತಿರುಗಿಸುವ ಸ್ಥಳಕ್ಕೆ ಶನಿವಾರ ಪೊಲೀಸ್ ಭದ್ರತೆಯೊಂದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಪಾಲೇಂಕರ್, ‘ಇವರು ಹರಾಮಿಗಳು, ಏನು ಬೇಕಾದರೂ ಮಾಡಬಹುದು’ ಎಂದಿದ್ದರು.

ತಪ್ಪಿನ ಅರಿವಾಗುತ್ತಿದ್ದಂತೆ, ಭಾವಾವೇಶದಲ್ಲಿ ಆ ಪದ ಬಳಸಿರುವುದಾಗಿಯೂ, ಅದನ್ನು ನಿರ್ಲಕ್ಷಿಸಲು ಮನವಿ ಮಾಡಿಕೊಂಡಿದ್ದರು.

click me!