ಸಿಎಂರನ್ನ ಏಕಾಂಗಿಯಾಗಿಸಿದ ಡರ್ಟಿ ಡೈರಿ ಪ್ರಕರಣ: ಅಸಹಾಯಕತೆ ಕಂಡು ಹಿಗ್ಗಿದ ಕಾಂಗ್ರೆಸ್'ನ ಒಂದು ಬಣ

Published : Feb 24, 2017, 09:08 PM ISTUpdated : Apr 11, 2018, 12:45 PM IST
ಸಿಎಂರನ್ನ ಏಕಾಂಗಿಯಾಗಿಸಿದ ಡರ್ಟಿ ಡೈರಿ ಪ್ರಕರಣ: ಅಸಹಾಯಕತೆ ಕಂಡು ಹಿಗ್ಗಿದ ಕಾಂಗ್ರೆಸ್'ನ ಒಂದು ಬಣ

ಸಾರಾಂಶ

ಕಾಂಗ್ರೆಸ್ ಹೈಕಮಾಂಡ್​ಗೆ ಕಪ್ಪ ಸಲ್ಲಿಸಿದ ವಿವರಗಳುಳ್ಳ ಡೈರಿ ಬಹಿರಂಗಗೊಂಡ ಪ್ರಕರಣ ಸಿಎಂ ಬುಡಕ್ಕೇ ಬಂದಿದೆ. ಅಷ್ಟೇ ಅಲ್ಲ, ಡೈರಿ ಬಹಿರಂಗಗೊಂಡದ್ದು ಪ್ರತಿಪಕ್ಷಗಳವರಿಗೆ ಮಾತ್ರವೇ ಅಲ್ಲದೇ, ಕಾಂಗ್ರೆಸ್'​ನ ಕೆಲವರಿಗೂ ಭಾರೀ ಖುಷಿ ತಂದಿದೆ. ಏಕೆ ಅಂತೀರಾ ಇಲ್ಲಿದೆ ವಿವರ

ಬೆಂಗಳೂರು(ಫೆ.25): ಕಾಂಗ್ರೆಸ್ ಹೈಕಮಾಂಡ್​ಗೆ ಕಪ್ಪ ಸಲ್ಲಿಸಿದ ವಿವರಗಳುಳ್ಳ ಡೈರಿ ಬಹಿರಂಗಗೊಂಡ ಪ್ರಕರಣ ಸಿಎಂ ಬುಡಕ್ಕೇ ಬಂದಿದೆ. ಅಷ್ಟೇ ಅಲ್ಲ, ಡೈರಿ ಬಹಿರಂಗಗೊಂಡದ್ದು ಪ್ರತಿಪಕ್ಷಗಳವರಿಗೆ ಮಾತ್ರವೇ ಅಲ್ಲದೇ, ಕಾಂಗ್ರೆಸ್'​ನ ಕೆಲವರಿಗೂ ಭಾರೀ ಖುಷಿ ತಂದಿದೆ. ಏಕೆ ಅಂತೀರಾ ಇಲ್ಲಿದೆ ವಿವರ

ಸಿಎಂಗೆ ಡೈರಿ ಸಂಕಟ

ಖುಷಿ ಪಡುತ್ತಿರುವವರಲ್ಲಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​, ತುಮಕೂರು ಹಾಗೂ ಉತ್ತರ ಕರ್ನಾಟಕದ ಭಾಗದಿಂದ ಸಚಿವರು ಹಾಗೂ ಸಿಎಂ ವಿರುದ್ಧ ಮೃದುವಾಗಿಯೇ ಮಸಲತ್ತು ಮಾಡುತ್ತಿದ್ದ ಮೂಲ ಕಾಂಗ್ರೆಸ್ಸಿಗರೂ ಇದ್ದಾರೆ.

ಬಹಿರಂಗಗೊಂಡಿರುವ ಡೈರಿಯಲ್ಲಿ  ಹೆಚ್​.ಸಿ.ಎಂ. ಕೆ.ಜೆ.ಜಿ, ಎಂ.ಬಿ.ಪಿ, ಆರ್.ವಿ.ಡಿ, ಕೆ.ಇ.ಎಂ.ಪಿ. ಅಂತಾ ಪ್ರಮುಖ ಹೆಸರನ್ನು ಉಲ್ಲೇಖಿಸಲಾಗಿದೆ. ಇವರೆಲ್ಲಾ ಸಿಎಂ ಬೆಂಬಲಿಗರೇ, ಜೊತೆಗೆ ಸ್ವತಃ ಗೋವಿಂದರಾಜು ಸಿಎಂ ಆಪ್ತರು. ಹೀಗಾಗಿ ಸಿಎಂ, ಡೈರಿ ಬಹಿರಂಗ  ವಿಚಾರದ ಬಗ್ಗೆ ಹೈಕಮಾಂಡ್​ ಜತೆ ಮಾತ್ರ ಚರ್ಚಿಸಿ ಮೌನವಹಿಸಿದ್ದಾರೆ.

ಕಪ್ಪ ಪಡೆದಿರುವವರ ಪಟ್ಟಿಯಲ್ಲಿ ಸೋನಿಯಾ, ರಾಹುಲ್​ ಗಾಂಧಿ ಹಾಗೂ ಪ್ರಮುಖ ಹೈಕಮಾಂಡ್ ನಾಯಕರ ಹೆಸರೇ ಇರುವುದರಿಂದ ಹೈಕಮಾಂಡ್​ ಸೂಚನೆಯಂತೆ ಮುಂದಿನ ನಡೆ ಇಡುವ ತೀರ್ಮಾನ ಮಾಡಿದ್ದಾರೆ. ಏನೇ ಆಗಲಿ, ಡೈರಿ ಬಹಿರಂಗಗೊಂಡಿರುವ ಪ್ರಕರಣ ನೇರ ದುಷ್ಪರಿಣಾಮ ಏನೇ ಇದ್ದರೂ ಅದು ಸಿಎಂ ಸಿದ್ದರಾಮಯ್ಯ ಬಣಕ್ಕೇ ಎನ್ನುವುದರಲ್ಲಿ ಎರಡು ಮಾತಿಲ್ಲ.

ವರದಿ: ವಿರೇಂದ್ರ ಉಪ್ಪುಂದ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ