
ಬೆಂಗಳೂರು(ಡಿ.15): ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರದ ಬಿಸಿ ತಮಗೂ ತಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಬಹಿರಂಗವಾಗಿ ತೋರ್ಪಡಿಸಿಕೊಂಡಿದ್ದಾರೆ. ಸಿಎಂ ಗೃಹ ಕಚೇರಿಯಲ್ಲಿ ಇಂದು ವರುಣಾದಿಂದ ಹಣಕಾಸಿನ ನೆರವು ಕೇಳಿ ಬಂದಿದ್ದ ಮಹಿಳೆಯೊಬ್ಬರಿಗೆ ಇದೇ ಕಾರಣ ನೀಡಿ ನೆರವು ನೀಡಲು ಸಿದ್ಧರಾಮಯ್ಯ ನಿರಾಕರಿಸಿದರು.
ಚಿಕ್ಕಲಟ್ಟನಹಳ್ಳಿ ಗ್ರಾಮದ ಕಮಲಮ್ಮ ಮಗ ತೀರಿಕೊಂಡಿರುವ ಕಾರಣ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು. ಆದರೆ, ಈಗ ನಾನು ಯಾರಿಗೂ ಹಣ ಕೊಡಕ್ಕಾಗಲ್ಲಮ್ಮಾ, ಮೋದಿ ಎಲ್ಲ ಕಡೆ ಬೀಗ ಹಾಕಿಬಿಟ್ಟಿದ್ದಾರೆ, ಬಸ್ ಚಾರ್ಜ್ ಕೊಡುತ್ತೇನೆ, ಊರಿಗೆ ಹೋಗಿ ಅಂತ ಸಿಎಂ ಅಂದಿದ್ದಕ್ಕೆ ಬೇಸರಗೊಂಡ ಕಮಲಮ್ಮ ಕಣ್ಣೀರು ಹಾಕುತ್ತಾ ಹೊರನಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.