
ತಿರುವನಂತಪುರ(ಆ.13): ಮಕ್ಕಳ ಜೀವಕ್ಕೆ ಎರವಾಗುವ ರಷ್ಯಾ ಮೂಲದ ‘ಬ್ಲೂ ವೇಲ್’ ಅಂತರ್ಜಾಲ ಆಟವನ್ನು ತತ್‌ಕ್ಷಣವೇ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
‘ಪ್ರಾಣಕ್ಕೆ ಬೆದರಿಕೆಯೊಡ್ಡುವ ಈ ಆಟವು ನಮ್ಮ ಹೊಸ್ತಿಲಲ್ಲೇ ಇದೆ. ರಾಷ್ಟ್ರಾದ್ಯಂತ ಅತ್ಯಮೂಲ್ಯವಾದ ಜೀವಗಳ ರಕ್ಷಣೆಗಾಗಿ ಬ್ಲೂ ವೇಲ್ ಆಟದ ಮೇಲೆ ನಿಷೇ‘ ಹೇರಿಕೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಪಿಣರಾಯಿ ಪ್ರತಿಪಾದಿಸಿದ್ದಾರೆ.
‘ಇದೇನು ವಿಡಿಯೊ ಗೇಮ್ ಅಲ್ಲ. ಆದರೆ, ಅನಾಮಿಕ ವ್ಯಕ್ತಿಯಿಂದ ನಿರ್ದೇಶನ ಪಡೆಯುವ ಈ ಆಟವು ಕೊನೆಗೆ ಆತ್ಮಹತ್ಯೆಯಲ್ಲಿ ಅಂತ್ಯವಾಗುತ್ತದೆ. ಈ ಗೇಮ್‌ನಿಂದಾಗಿ ಈಗಾಗಲೇ ರಾಷ್ಟ್ರದಲ್ಲಿ ಕೆಲವರು ಆತ್ಮಹತ್ಯೆಗೂ ಶರಣಾಗಿರುವ ಬಗ್ಗೆ ಮಾಧ್ಯಮ ವರದಿಗಳು ಬೆಳಕು ಚೆಲ್ಲಿವೆ’ ಎಂದು ಅವರು ಹೇಳಿದ್ದಾರೆ. ಅಲ್ಲದೆ ರಾಜ್ಯ ಪೊಲೀಸರು ಜಾಗೃತಿ ಮೂಡಿಸಲು ಯತ್ನಿಸುತ್ತಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.