ದಿಲ್ಲಿಯಲ್ಲಿ ತಲೆ ಎತ್ತಲಿದೆ ಪ್ರಧಾನಿಗಳ ಮ್ಯೂಸಿಯಂ

Published : Oct 15, 2018, 07:42 AM IST
ದಿಲ್ಲಿಯಲ್ಲಿ ತಲೆ ಎತ್ತಲಿದೆ ಪ್ರಧಾನಿಗಳ ಮ್ಯೂಸಿಯಂ

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಇತರ ಕಾಂಗ್ರೆಸ್ಸಿಗರ ವಿರೋಧದ ಹೊರತಾಗ್ಯೂ ಐತಿಹಾಸಿಕ ‘ತೀನ್ ಮೂರ್ತಿ ಭವನ’ದ ಆವರಣದಲ್ಲಿ, ದೇಶದ ಎಲ್ಲ ಪ್ರಧಾನ ಮಂತ್ರಿಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಲಿದೆ. 

ನವದೆಹಲಿ (ಅ. 15):  ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಇತರ ಕಾಂಗ್ರೆಸ್ಸಿಗರ ವಿರೋಧದ ಹೊರತಾಗ್ಯೂ ಐತಿಹಾಸಿಕ ‘ತೀನ್ ಮೂರ್ತಿ ಭವನ’ದ ಆವರಣದಲ್ಲಿ, ದೇಶದ ಎಲ್ಲ ಪ್ರಧಾನ ಮಂತ್ರಿಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಲಿದೆ.

ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 25 ಎಕರೆ ವ್ಯಾಪ್ತಿಯಲ್ಲಿ ಚಾಚಿರುವ ತೀನ್‌ಮೂರ್ತಿ ಭವನದ ವಿಶಾಲ ಆವರಣದಲ್ಲಿ ‘ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯ’ ತಲೆಯೆತ್ತಲಿದೆ. 

ನಿರ್ಮಾಣ ವೆಚ್ಚ 270 ಕೋಟಿ ರುಪಾಯಿ. ಬ್ರಿಟಿಷರು 1930 ರಲ್ಲಿ ಭಾರತದಲ್ಲಿನ ಬ್ರಿಟನ್ ಸೇನಾಧಿಪತಿಯವಾಸಕ್ಕೆ ನಿರ್ಮಿಸಿದ ಬಂಗಲೆಯೇ ‘ತೀನ್‌ಮೂರ್ತಿ ಭವನ’. ಈ ಭವನವು ಮಾಜಿ ಪ್ರಧಾನಿ ಪಂ. ಜವಾಹರಲಾಲ್ ನೆಹರು ಅವರು ತಂಗಿದ್ದ ಭವ್ಯ ಬಂಗಲೆ ಕೂಡ ಆಗಿದ್ದು, ಮಹಾತ್ಮಾ ಗಾಂಧೀಜಿ ಅವರ ಹತ್ಯೆಯ ನಂತರ 16 ವರ್ಷ ಕಾಲ ಇದೇ ನಿವಾಸದಲ್ಲಿ ವಾಸವಿದ್ದರು. ನೆಹರು ಅವರ ನಿಧನಾನಂತರ ತೀನ್‌ಮೂರ್ತಿ ಭವನವನ್ನು ಸಂಪೂರ್ಣವಾಗಿ ನೆಹರು ಸ್ಮಾರಕ ಭವನವನ್ನಾಗಿ ಮಾಡಲಾಗಿದ್ದು, ಅಲ್ಲಿ ಅವರು ಬಳಸಿದ್ದ ಹಲವಾರು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಇದಲ್ಲದೆ, ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯ (ಎನ್‌ಎಂಎಂಎಲ್) ಎಂಬ ಸಂಸ್ಥೆ ಇದೇ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೈರಾಂ ರಮೇಶ್ ಸದಸ್ಯರು. ಇದೀಗ, ಕೇವಲ ಪಂ. ನೆಹರು ಅವರಿಗೆ ಮೀಸಲಾಗಿದ್ದ ತೀನ್‌ಮೂರ್ತಿ ಭವನದಲ್ಲಿ, ನೆಹರು ನಂತರ ಬಂದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿದಂತೆ ಇತರ ಪ್ರಧಾನಿಗಳ ಸಂಪೂರ್ಣ ಮಾಹಿತಿ, ಅವರು ಉಪಯೋಗಿಸಿದ ಅಮೂಲ್ಯ ವಸ್ತುಗಳನ್ನು ಒಳಗೊಂಡ ವಸ್ತುಸಂಗ್ರಹಾಲಯ ನಿರ್ಮಾಣ ಮಾಡಲು ಮೋದಿ ಸರ್ಕಾರ ಮುಂದಾಗಿದೆ.

ಇದಕ್ಕೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಇತ್ತೀಚೆಗೆ ಪತ್ರಮುಖೇನ ವಿರೋಧ ವ್ಯಕ್ತಪಡಿಸಿ, ‘ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೂಡ ತೀನ್‌ಮೂರ್ತಿ ಭವನದ ತಂಟೆಗೆ ಬಂದಿರಲಿಲ್ಲ. ಆದರೆ ಈಗ ಮೋದಿ ಸರ್ಕಾರವು ಭವನದ ಮೂಲ ಸ್ವರೂಪಕ್ಕೇ ಭಂಗ ತರಲು ಯತ್ನಿಸುತ್ತಿದೆ’ ಎಂದು ದೂರಿದ್ದರು. ಅಲ್ಲದೆ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನೂ ಕಾಂಗ್ರೆಸ್ ನಿಯೋಗವೊಂದು ಭೇಟಿಯಾಗಿ, ನೆಹರು ನಿವಾಸದ ಆವರಣದಲ್ಲಿ ಇತರ ಪ್ರಧಾನಿಗಳ ಮ್ಯೂಸಿಯಂ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್