ಅನ್ನಭಾಗ್ಯಕ್ಕೆ ಕತ್ತರಿ ಹಾಕಿದ ಕುಮಾರಸ್ವಾಮಿ!

First Published Jul 5, 2018, 12:43 PM IST
Highlights

ಸಿಎಂ ಕುಮರಸ್ವಾಮಿ ಮೊದಲ ಬಜೆಟ್

ವಿಧನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಸಿಎಂ

ಇಲಾಖಾವಾರು ಅನುಮೋದನೆಗಳ ವಿವರ ಮಾಹಿತಿ

ಅನ್ನಭಾಗ್ಯಕ್ಕೆ ಕತ್ತರಿ ಹಾಕಿದ ಕುಮಾರಸ್ವಾಮಿ

ಬೆಂಗಳೂರು(ಜು.5): ಸಿಎಂ ಕುಮಾರಸ್ವಾಮಿ ವಿಧಾನಸಭೆಯಲ್ಲಿ ನೂತನ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸುತ್ತಿದ್ದು, ಇಲಾಖಾವಾರು ಅನುಮೋದನೆಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಈಗಾಗಳೇ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಆರ್ಥಿಕ ಮಾರ್ಗ ನಿರ್ಧರಿಸಲಾಗಿದೆ. ಅದರಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅನುಮೋದನೆ ಕುರಿತು ಸಿಎಂ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಎಂದೇ ಹೇಳಲಾಗುತ್ತಿದ್ದ ಅನ್ನಭಾಗ್ಯ ಯೋಜನೆಗೆ ಸಿಎಂ ಕುಮಾರಸ್ವಾಮಿ ಕತ್ತರಿ ಹಾಕಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಈ ಮೊದಲು ನೀಡಲಾಗುತ್ತಿದ್ದ ೧೦ ಕೆಜಿ ಅಕ್ಕಿಯ ಬದಲಾಗಿ ೫ ಕೆಜಿಗೆ ಇಳಿಸಲಾಗಿದೆ.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತೀ ಬಿಪಿಎಲ್ ಪಡಿಒತರ ಚೀಟಿಗೆ 5 ಕೆಜಿ ಅಕ್ಕಿ ,1 ಕೆಜಿ ಪಾಮ್​ ಎಣ್ಣೆ, 1 ಕೆಜಿ ಉಪ್ಪು ಮತ್ತು 1ಕೆಜಿ ಸಕ್ಕರೆ ಉಚಿತವಾಗಿ ನೀಡಲಾಗುವುದು ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಆದರೆ ಈ ಮೊದಲು ನೀಡುತ್ತಿದ್ದ ೧೦ ಕೆಜಿ ಅಕ್ಕಿನ್ನು ೫ ಕೆಜಿಗೆ ಇಳಿಸಿರುವುದು ಈ ಬಜೆಟ್ ನ ವಿಶೇಷ.

ಇನ್ನು ಆಹಾರ ಸುರಕ್ಷ ಮಾಹೆಯಡಿಯಲ್ಲಿ ವರ್ಷಕ್ಕೊಮ್ಮೆ ಪಡಿತರ ಚೀಟಿ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪಡಿತರ ಚೀಟಿ ಅಕ್ರಮ ತಡೆಗಟ್ಟಲು ಇದು ಸಹಾಯಕಾರಿಯಾಗಲಿದೆ ಎಂದು ಹೇಳಲಾಗಿದೆ.

click me!