ಮಂಡ್ಯದಲ್ಲಿ ನಡೆಯಿತೊಂದು ಅಮಾನವೀಯ ಘಟನೆ

First Published Jul 5, 2018, 12:25 PM IST
Highlights

 ಮಂಡ್ಯದಲ್ಲಿ ರೋಗಿಯೊಬ್ಬನನ್ನು ಆಂಬುಲೆನ್ಸ್ ಸಿಗದೇ ಗೂಡ್ಸ್ ಆಟೋದಲ್ಲಿ ಸಾಗಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 

ಮಂಡ್ಯ : ಮಂಡ್ಯದಲ್ಲಿ ರೋಗಿಯೊಬ್ಬನನ್ನು ಆಂಬುಲೆನ್ಸ್ ಸಿಗದೇ ಗೂಡ್ಸ್ ಆಟೋದಲ್ಲಿ ಸಾಗಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ರೈತನೊಬ್ಬ ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ. ಆತನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲು 108 ಆಂಬುಲೆನ್ಸ್ ಗೆ ಕರೆ ಮಾಡಿದರೆ ಮದ್ದೂರಿನಿಂದ 15 ಕಿಲೋ ಮೀಟರ್ ಇರುವ ಮಂಡ್ಯಕ್ಕೆ ಕರೆತರಲು ಆಂಬುಲೆನ್ಸ್ ಚಾಲಕ ಒಂದೂವರೆ ಸಾವಿರ ಹಣ ಕೇಳಿದ್ದಾನೆ. 

ಬಡ ರೈತ ಕುಟುಂಬ ಅಷ್ಟು ಹಣ ಕೊಡಲಾಗದೇ ಕೇವಲ 200 ರೂ. ಕೊಟ್ಟು ಗೂಡ್ಸ್ ಆಟೋ ಮೂಲಕ ಮಂಡ್ಯಕ್ಕೆ ಗಾಯಾಳುವನ್ನು ಕರೆತಂದಿದ್ದಾರೆ. 

ಇನ್ನು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ನಡೆದರೂ ಆಂಬುಲೆನ್ಸ್ ಬಾರದ ಕಾರಣ ಎತ್ತಿನ ಗಾಡಿಯಲ್ಲಿ ಗಾಯಾಳುಗಳನ್ನು ಸಾಗಿಸಿದ ಘಟನೆ ಸಹ ನಡೆದಿದ್ದು, ಉಚಿತ ಆಂಬುಲೆನ್ಸ್ ಸೇವೆ ಎಂದು ಆರೋಗ್ಯ ಇಲಾಖೆ ಹೇಳಿದರೂ ಕೂಡ ಆಂಬುಲೆನ್ಸ್ ಚಾಲಕರು ಮಾತ್ರ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಬಡವರ ಸೇವೆಗೆ ಬರುತ್ತಿಲ್ಲ.

click me!