‘ನೀವು ಸರ್ಕಾರಕ್ಕಿಂತ ದೊಡ್ಡವರಾ..'?: ಅಬಕಾರಿ ಆಯುಕ್ತರ ಮೇಲೆ ಸಿಎಂ ಗರಂ!

Published : Jun 08, 2018, 06:39 PM ISTUpdated : Jun 08, 2018, 06:40 PM IST
‘ನೀವು ಸರ್ಕಾರಕ್ಕಿಂತ ದೊಡ್ಡವರಾ..'?: ಅಬಕಾರಿ ಆಯುಕ್ತರ ಮೇಲೆ ಸಿಎಂ ಗರಂ!

ಸಾರಾಂಶ

ಅಬಕಾರಿ ಆಯುಕ್ತ  ಮುನೀಶ್ ಮೌನೇಶ್ ಮೌದ್ಗಿಲ್ ಮೇಲೆ ಸಿಎಂ ಗರಂ ನೀವು ಸರ್ಕಾರಕ್ಕಿಂತ ದೊಡ್ಡವರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಮಹಿಳಾ ಅಬಕಾರಿ ಮರು ವರ್ಗಾವಣೆಗೆ ನಿರ್ಲಕ್ಷ್ಯ ತೋರಿದ ಆರೋಪ ಸೋಮವಾರದೊಳಗೆ ಮರು ವರ್ಗಾವಣೆ ಮಾಡದಿದ್ದರೆ ಅಮಾನತು

ಬೆಂಗಳೂರು(ಜೂ.8): ಅಬಕಾರಿ ಆಯುಕ್ತ ಮುನೀಶ್ ಮೌದ್ಗಿಲ್ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಟ್ಟಾದ ಪ್ರಸಂಗ ಜರುಗಿದೆ. ಚುನಾವಣೆಗೆ ಮೊದಲು ವಿವಿಧ ಸ್ಥಳಗಳಿಗೆ ನಿಯೋಜನೆಗೊಂಡಿದ್ದ ಅಬಕಾರಿ ಇನ್ಸಪೆಕ್ಟರ್‌ಗಳನ್ನು ಮತ್ತೆ ಮೂಲ ಸ್ಥಳಗಳಿಗೆ ವಾಪಸ್ ವರ್ಗಾಯಿಸುವಂತೆ ಕುಮಾರಸ್ವಾಮಿ ಆದೇಶಿಸಿದ್ದರು.

ಆದರರ್ ಮುನೀಶ್ ಮೌದ್ಗಿಲ್ ಸಿಎಂ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಮಹಿಳಾ ಅಬಕಾರಿ ಇನ್ಸಪೆಕ್ಟರ್‌ಗಳು ಸಿಎಂ ಮುಂದೆ ಅಳಲು ತೋಡಿಕೊಂಡ ಪರಿಣಮ, ಸಿಟ್ಟಾದ ಸಿಎಂ ಕುಮಾರಸ್ವಾಮಿ ಮೌನೇಶ್ ಅವರನ್ನು ಅಮಾನತು ಮಾಡುವಂತೆ ಆದೇಶ ನೀಡಿದರು.

ಮುನೀಶ್ ಮುದ್ಗಿಲ್ ಸರ್ಕಾರಕ್ಕಿಂತ ದೊಡ್ಡವರಾ ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದ ಕುಮಾರಸ್ವಾಮಿ, ಸೋಮವಾರದೊಳಗಾಗಿ ಎಲ್ಲ ಮಹಿಳಾ ಅಬಕಾರಿ ಇನ್ಸಪೆಕ್ಟರ್‌ಗಳ ಮರು ವರ್ಗಾವಣೆ ಆದೇಶ ಆಗಬೇಕು.ಇಲ್ಲವಾದರೆ ಅಬಕಾರಿ ಆಯುಕ್ತರನ್ನು ಅಮಾನತು ಮಾಡಲಾಗುವುದು ಎಂದು ಗುಡುಗಿದರು.

ಕುಮಾರಸ್ವಾಮಿ ಆಕ್ರೋಶವನ್ನು ಮನಗಂಡ ಸಿಎಂ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ತಕ್ಷಣವೇ ಮರು ವರ್ಗಾವಣೆ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ
ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!