ಕಂಚಿಯಲ್ಲಿ 500 ಕ್ಕೆ ಸಿಗುವ ಸೀರೆ ನಮ್ಮಲ್ಲೇಕಿಲ್ಲ? ಸಿಎಂ

By Web DeskFirst Published Mar 6, 2019, 9:08 AM IST
Highlights

ನಮ್ಮ ಮೈಸೂರು ಸಿಲ್ಕ್ ಸೀರೆಗಳು ಸಾಮಾನ್ಯ ಜನರ ಕೈಗೆಟಕುತ್ತಿಲ್ಲ. ಆದರೆ, ತಮಿಳುನಾಡಿನ ಕಂಚಿಗೆ ಹೋದರೆ ಸಾವಿರಾರು ರು. ಬೆಲೆಯ ಸೀರೆ ಬರೀ ಐನೂರು ರು.ಗೆ ಸಿಗುತ್ತದೆ. ನಮ್ಮಲ್ಲಿ ಏಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಮ್ಮ ಅಧಿಕಾರಿಗಳು ಒಮ್ಮೆ ಕಂಚಿಗೆ ಹೋಗಿಬರುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರು (ಮಾ. 06):  ನಮ್ಮ ಮೈಸೂರು ಸಿಲ್ಕ್ ಸೀರೆಗಳು ಸಾಮಾನ್ಯ ಜನರ ಕೈಗೆಟಕುತ್ತಿಲ್ಲ. ಆದರೆ, ತಮಿಳುನಾಡಿನ ಕಂಚಿಗೆ ಹೋದರೆ ಸಾವಿರಾರು ರು. ಬೆಲೆಯ ಸೀರೆ ಬರೀ ಐನೂರು ರು.ಗೆ ಸಿಗುತ್ತದೆ. ನಮ್ಮಲ್ಲಿ ಏಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಮ್ಮ ಅಧಿಕಾರಿಗಳು ಒಮ್ಮೆ ಕಂಚಿಗೆ ಹೋಗಿಬರುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಸಾರ್ವಜನಿಕ ಉದ್ದಿಮೆಗಳು ಹಂತ ಹಂತವಾಗಿ ಖಾಸಗಿ ಉದ್ದಿಮೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಬೆಳೆಯಬೇಕು. ಹೊಸ ಹೊಸ ಬದಲಾವಣೆಗಳನ್ನು ತರಬೇಕು. ಆದರೆ, ಅಂತಹ ಪ್ರಯತ್ನಗಳು ಆಗುತ್ತಿಲ್ಲ ಎಂಬ ಅನುಮಾನವಿದೆ ಎಂದರು.

ನಮ್ಮ ಮೈಸೂರು ಸಿಲ್ಕ್  ಸಾಬೂನು ಕಾರ್ಖಾನೆಗೆ ಪ್ರಪಂಚದಾದ್ಯಂತ ಹೆಸರಿದೆ. ಆದರೆ, ಅವುಗಳು ಅವನತಿಯತ್ತ ಹೋಗದಂತೆ ತಡೆಯುವ ಪ್ರಯತ್ನಗಳಾಗುತ್ತಿಲ್ಲ ಎಂಬ ಅನುಮಾನವಿದೆ. ಮೈಸೂರು ಸಿಲ್ಕ್ ಸೀರೆಗಳನ್ನು ಸಾಮಾನ್ಯ ಜನರು ಕೊಂಡುಕೊಳ್ಳಲು ಆಗುತ್ತಿಲ್ಲ. ಅದೇ ಕಂಚಿಗೆ ಹೋದರೆ ಬರೀ ಐನೂರು ರು.ಗಳಿಗೆ ಸಾವಿರಾರು ರು. ಬೆಲೆಯ ಸೀರೆಗಳನ್ನು ಮಾರಾಟ ಮಾಡುತ್ತಾರೆ. ನಮ್ಮಲ್ಲಿ ಏಕೆ ಅಷ್ಟುಕಡಿಮೆ ಬೆಲೆಗೆ ಉತ್ತಮ ಸೀರೆಗಳನ್ನು ಉತ್ಪಾದಿಸಿ ನೀಡಲು ಸಾಧ್ಯವಾಗುತ್ತಿಲ್ಲ. ಒಮ್ಮೆ ನಮ್ಮ ಅಧಿಕಾರಿಗಳು ಕಂಚಿಗೆ ಹೋಗಿ ನೋಡಿಕೊಂಡು ಬರುವುದು ಸೂಕ್ತ ಎಂದರು.

 

click me!