ಪಾಕ್‌ಗೆ ರೈಲು ಸಿಗದೇ ಭಾರತದ ವರ, ಪಾಕ್‌ ವಧುವಿನ ಮದುವೆ ರದ್ದು

Published : Mar 06, 2019, 08:39 AM IST
ಪಾಕ್‌ಗೆ ರೈಲು ಸಿಗದೇ ಭಾರತದ ವರ, ಪಾಕ್‌ ವಧುವಿನ ಮದುವೆ ರದ್ದು

ಸಾರಾಂಶ

ಭಾರತ ಹಾಗೂ ಪಾಕಿಸ್ತಾನದ್ ನಡುವೆ ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಹೀಗಾಘಿ ಉಭಯ ದೇಶಗಳ ನಡುವೆ ಸಂಚರಿಸುತ್ತಿದ್ದ ರೈಲುಗಳ ಸಂಚಾರವನ್ನು ತಡೆಯಲಾಗಿದೆ.ಈ ಎಲ್ಲಾ ಕಾರಣಗಳಿಂದಾಗಿ ಮದುವೆಯೇ ರದ್ದಾದ ಪ್ರಕರಣ ಬೆಳಕಿಗೆ ಬಂದಿದೆ.

ಬಾರ್ಮೇಡ್‌[ಮಾ.06]: ಪುಲ್ವಾಮಾ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ಉಂಟಾಗಿರುವುದರಿಂದ ಭಾರತದ ವರ ಹಾಗೂ ಪಾಕಿಸ್ತಾನದ ವಧುವಿನ ವಿವಾಹವೊಂದು ಮುರಿದುಬಿದ್ದಿದೆ.

ಬಾರ್ಮೇಡ್‌ ಜಿಲ್ಲೆಯ ಗಡಿ ಗ್ರಾಮದ ಖೆಜಾದ್‌ ಕಾ ಪಾರ್‌ ಗ್ರಾಮದ ವರ ಮಹೇಂದ್ರ ಸಿಂಗ್‌ ಹಾಗೂ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಅಮರ್‌ಕೋಟ್‌ ಜಿಲ್ಲೆಯ ಸಿನೋಯಿ ಗ್ರಾಮದ ವಧು ಚಗನ್‌ ಕನ್ವಾರ್‌ ವಿವಾಹ ನಿಶ್ಚಯವಾಗಿತ್ತು. ಮದುವೆ ಸಮಾರಂಭಕ್ಕೆ ತೆರಳಲು ಥಾರ್‌ ಎಕ್ಸ್‌ಪ್ರೆಸ್‌ ರೈಲನ್ನು ವರನ ಕುಟುಂಬ ಕಾಯ್ದಿರಿಸಿತ್ತು.

ಪಾಕಿಸ್ತಾನದ ಲಾಹೋರ್‌ ಮತ್ತು ಭಾರತದ ಅಟ್ಟಾರಿ ಮೂಲಕ ಸೋಮವಾರ ಮತ್ತು ಗುರುವಾರ ಈ ರೈಲು ಸಂಚರಿಸುತ್ತದೆ. ಆದರೆ, ಉದ್ವಿಗ್ನ ಸ್ಥಿತಿಯ ಹಿನ್ನೆಲೆಯಲ್ಲಿ ಪಾಕ್‌ ಅಧಿಕಾರಿಗಳು ರೈಲು ಸಂಚಾರವನ್ನು ಅಮಾನತುಗೊಳಿಸಿದ್ದರಿಂದ ರೈಲು ಸಂಚಾರ ರದ್ದುಗೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಮದುವೆಯನ್ನು ರದ್ದುಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್
ಡಿಕೆ ಊಟ ವರ್ಸಸ್‌ ಸಿದ್ದು ನಾಷ್ಟ! ಕಾಂಗ್ರೆಸ್‌ ಬಣಗಳ ಔತಣ ಸಮರ