
ಬೆಂಗಳೂರು[ಜೂ.24]: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳ ನಂತರ ಹೆಚ್.ಡಿ. ಕುಮಾರಸ್ವಾಮಿ ರಿಲ್ಯಾಕ್ಸ್ ಮೂಡ್'ಗೆ ತೆರಳಿದ್ದಾರೆ.
ತಮ್ಮ ಭದ್ರತಾ ಸಿಬ್ಬಂದಿಗಳನ್ನು ಬಿಟ್ಟು ತಮ್ಮ ಸ್ವಂತ ಕಾರಿನಲ್ಲಿ ಸಿಎಂ ತೆರಳಿದ್ದಾರೆ. ಬೆಂಗಾವಲು ಪಡೆಯ ವಾಹನಗಳು ಮುಖ್ಯಮಂತ್ರಿಯವರ ಜೆಪಿ ನಗರದ ನಿವಾಸದೆದುರು ಇವೆ. ಹೆಚ್ಡಿಕೆ ಮಾತ್ರ ಜೆ.ಪಿ. ನಗರದಲ್ಲಿಲ್ಲ.
ಸಿಎಂ ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ತಮ್ಮ ಆಪ್ತ ವಲಯದದವರಿಗೂ ಮಾಹಿತಿ ನೀಡದೆ ನಿಗೂಢ ಸ್ಥಳಕ್ಕೆ ಸಿಎಂ ತೆರಳಿದ್ದಾರೆ. ಕಳೆದೊಂದು ವಾರದಿಂದ ಬಜೆಟ್ ಪೂರ್ವಭಾವಿ ಸಭೆಯ ಕೆಲಸದಲ್ಲಿ ಮುಖ್ಯಮಂತ್ರಿಯವರು ನಿರತರಾಗಿದ್ದರು. ಸರ್ಕಾರಿ ರಜಾ ದಿನವಾದ ಭಾನುವಾರದಂದು ತಮ್ಮ ರಾಜಕೀಯ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ.
ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಜುಲೈ ಮೊದಲ ವಾರದಲ್ಲಿ ಮೈತ್ರಿ ಸರ್ಕಾರದ ಮೊದಲ ಆಯವ್ಯಯ ಮಂಡಿಸುವ ಸಾಧ್ಯತೆಯಿದೆ. ಖಾಲಿಯಿರುವ ಸಚಿವ ಸ್ಥಾನಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನದ ನೇಮಕದ ಜವಾಬ್ದಾರಿ ಇನ್ನು ಬಗೆಹರಿದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.