
ಸುಬ್ರಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಯಾತ್ರಾರ್ಥಿಗಳ ಓಮ್ನಿ ಕಾರಿನ ಮೇಲೆ ಬಿಳಿ ನೆಲೆಯ ಕಿದು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಯೊಂದು ದಾಳಿ ನಡೆಸಿದೆ. ಅದೃಷ್ಟವಶಾತ್ ಅದೇ ಸಮಯದಲ್ಲಿ ಬಸ್‌ವೊಂದು ಹಾರ್ನ್ ಮಾಡುತ್ತಾ ಬಂದಿದ್ದರಿಂದ ಕಾರಿ ನಲ್ಲಿದ್ದ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಕುಡ್ಲೂರು ನಿವಾಸಿ ಗಿರೀಶ್ ಎಂಬುವರು ಕುಟುಂಬ ಸಮೇತರಾಗಿ ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು.
ಸುಬ್ರಹ್ಮಣ್ಯ ವಲಯಾರಣ್ಯ ವ್ಯಾಪ್ತಿಯ ಬಿಳಿನೆಲೆ ಸಮೀಪದ ಕಿದುವಿನಲ್ಲಿ ಕಾಡಾನೆಯೊಂದು ಹಠಾತ್ ಆಗಿ ರಾಜ್ಯ ಹೆದ್ದಾರಿಯ ಮಧ್ಯೆ ಬಂದಿದೆ. ಈ ವೇಳೆ ಗಿರೀಶ್ ಕಾರನ್ನು ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ಆಗ ಏಕಾಏಕಿ ಕಾರಿನತ್ತ ಮುನ್ನುಗ್ಗಿ ಬಂದ ಕಾಡಾನೆ ಕಾರಿನ ಮುಂಭಾಗಕ್ಕೆ ಕಾಲು ಹಾಗೂ ಸೊಂಡಿಲಿನಿಂದ ಗುದ್ದಿ ಹಾನಿಗೊಳಿಸಿದೆ.
ಕಾಡಾನೆ ದಾಳಿ ಮಾಡಿದಾಗ ಚಾಲಕ ಗಿರೀಶ್ ಸೇರಿದಂತೆ 8 ಮಂದಿ ಕಾರಿನೊಳಗೆ ಇದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಜೋರಾಗಿ ಹಾರ್ನ್ ಹಾಕುತ್ತಾ ಬಂದಿದೆ. ಬಸ್ ಹಾರ್ನ್‌ಗೆ ಗಾಬರಿಗೊಂಡ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.