
ದಾವಣಗೆರೆ(ನ.18): ಸಂಸದ ಆಗುವುದಕ್ಕೆ ಅನಂತಕುಮಾರ್ ಹೆಗಡೆ ನಾಲಾಯಕ್, ನನ್ನ ಬಗ್ಗೆ ಮಾತಾಡುವುದಕ್ಕೆ ಅನಂತಕುಮಾರ್ ಹೆಗಡೆ ಎಷ್ಟು ನಾಲಗೆ'ಯಿದೆ? ನಮ್ಮ ಬಗ್ಗೆ ಕೀಳಾಗಿ ಮಾತಾಡಲು ಸಚಿವ ಹೆಗೆಡೆಗೆ ನೈತಿಕತೆ ಇದೆಯಾ' ಎಂದು ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದರು.
ಚನ್ನಗಿರಿಯಲ್ಲಿ 800 ಕೋಟಿ ರೂ.ಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಟಿಪ್ಪು ಒಬ್ಬ ದೇಶಭಕ್ತ. ಆದರೆ ಸಚಿವ ಅನಂತಕುಮಾರ್ ಹೆಗಡೆಗೆ ದೇಶದ ಇತಿಹಾಸವೇ ಗೊತ್ತಿಲ್ಲ. ಬಿಜೆಪಿಯವರು ಗಾಂಧೀಜಿಯನ್ನು ಕೊಂದ ನಾತೂರಾಂ ಗೂಡ್ಸೆ ವಂಶಸ್ಥರು. ಬಿಜೆಪಿ ಯಾವ ಉದ್ದೇಶಕ್ಕಾಗಿ ಪರಿವರ್ತನಾ ಯಾತ್ರೆ ಮಾಡುತ್ತಿದೆ. ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುತ್ತಿರುವುದು. ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಜಾತಿಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಡೋಂಗಿ ರಾಜಕಾರಣಿ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡೋಂಗಿ ರಾಜಕಾರಣ ಮಾಡಿದ್ರು.ಅಂದು ನೀವು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದ್ರೆ ನೋಟ್ ಪ್ರಿಂಟ್ ಮೆಷಿನ್ ಇಲ್ಲ ಎಂದಿದ್ದರು. ಈಗ ನಿಮಗೆ ತಾಕತ್ತಿದ್ದರೆ ಪ್ರಧಾನಿಯವರ ಮೇಲೆ ಒತ್ತಡ ಹಾಕಿ ರಾಷ್ಟ್ರೀಕೃತ ಬ್ಯಾಂಕ್'ಗಳ ಸಾಲ ಮನ್ನಾಮಾಡಿಸಿ ಎಂದ ಸಿಎಂ ಸವಾಲ್ ಹಾಕಿದರು.
ನರೇಂದ್ರ ಮೋದಿಯ ಅಚ್ಚೇ ದಿನ ಯಾರಿಗೆ ಬಂದಿದೆ. ರೈತರು ದಲಿತರು ಯಾರಿಗೂ ಬಂದಿಲ್ಲ. ಮೋದಿಯವರದು ಮನಕೀ ಬಾತ್'ನಿಂದ ಏನು ಆಗಿಲ್ಲ. ನಮ್ಮ ಕಾಮ್ ಕೀ ಬಾತ್ ನಿಂದ ಎಲ್ಲಾ ಆಗಿದೆ. ರಾಜ್ಯಾದ್ಯಂತ ಸಾಗುತ್ತಿರುವುದು ಬಿಜೆಪಿಯ ಪರಿವರ್ತನಾ ಯಾತ್ರೆ ಅಲ್ಲ. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯ ಪಶ್ಚಾತ್ತಾಪದ ಯಾತ್ರೆ. ಮಾಡಬಾರದ ತಪ್ಪುಗಳನ್ನು ಮಾಡಿ ಈಗ ಬಿಜೆಪಿಯ ಪಶ್ಚಾತ್ತಾಪ ಯಾತ್ರೆ ಮಾಡುತ್ತಿದೆ' ಎಂದು ಬಿಜೆಪಿ ನಾಯಕರನ್ನು ಅಪಹಾಸ್ಯ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.