20 ಸೆಕೆಂಡ್ ಬೇಗ ರೈಲು ತೆರಳಿದ್ದಕ್ಕೆ ಜಪಾನ್ ರೈಲ್ವೆ ಕ್ಷಮೆ

Published : Nov 18, 2017, 02:40 PM ISTUpdated : Apr 11, 2018, 12:35 PM IST
20 ಸೆಕೆಂಡ್ ಬೇಗ ರೈಲು ತೆರಳಿದ್ದಕ್ಕೆ ಜಪಾನ್ ರೈಲ್ವೆ ಕ್ಷಮೆ

ಸಾರಾಂಶ

ಟೋಕಿಯೋಗೆ ತೆರಳುವ ಸುಕುಬಾ ಎಕ್ಸ್‌'ಪ್ರೆಸ್ ರೈಲು ಮಿನಾಮಿ ನಾಗರೇಯಮಾ ನಿಲ್ದಾಣದಿಂದ 9 ಗಂಟೆ 44 ನಿಮಿಷ 40 ಸೆಕೆಂಡ್‌'ಗೆ ನಿರ್ಗಮಿಸುವ ಬದಲಿಗೆ, 9 ಗಂಟೆ 44 ನಿಮಿಷ 20 ಸೆಕೆಂಡ್‌ಗೆ ಅಂದರೆ, 20 ಸೆಕೆಂಡ್ ಮುಂಚಿತವಾಗಿ ನಿರ್ಗಮಿಸಿತ್ತು.

ಟೋಕಿಯೊ(ನ.18): ನಮ್ ದೇಶದಲ್ಲಿ ಸರ್ಕಾರಿ ಬಸ್ಸು, ರೈಲು ಸೇರಿದಂತೆ ಯಾವ ವಾಹನವೂ ನಿಗದಿತ ಸಮಯಕ್ಕೆ ಬರುವುದಿಲ್ಲ ಅನ್ನೋದು ಕಾಮನ್. ಆದರೆ, ಜಪಾನ್‌'ನಲ್ಲಿ ನಿಗದಿತ ಸಮಯಕ್ಕಿಂತ 20 ಸೆಕೆಂಡ್‌'ಗಳ ಮುಂಚಿತವಾಗಿಯೇ ರೈಲ್ವೆ ಪ್ಲಾಟ್‌'ಫಾರಂನಿಂದ ಟ್ರೈನ್ ನಿರ್ಗಮಿಸಿದೆ.

ಇದೇ ಕಾರಣಕ್ಕಾಗಿ ಅಲ್ಲಿನ ಸುಕುಬಾ ಎಕ್ಸ್‌'ಪ್ರೆಸ್ ರೈಲು ಕಂಪನಿ ಗ್ರಾಹಕರ ಕ್ಷಮೆ ಯಾಚನೆ ಮಾಡಿದೆ. ಟೋಕಿಯೋಗೆ ತೆರಳುವ ಸುಕುಬಾ ಎಕ್ಸ್‌'ಪ್ರೆಸ್ ರೈಲು ಮಿನಾಮಿ ನಾಗರೇಯಮಾ ನಿಲ್ದಾಣದಿಂದ 9 ಗಂಟೆ 44 ನಿಮಿಷ 40 ಸೆಕೆಂಡ್‌'ಗೆ ನಿರ್ಗಮಿಸುವ ಬದಲಿಗೆ, 9 ಗಂಟೆ 44 ನಿಮಿಷ 20 ಸೆಕೆಂಡ್‌ಗೆ ಅಂದರೆ, 20 ಸೆಕೆಂಡ್ ಮುಂಚಿತವಾಗಿ ನಿರ್ಗಮಿಸಿತ್ತು.

ಈ ಘಟನೆ ಬಗ್ಗೆ ಯಾರೊಬ್ಬರೂ ದೂರು ನೀಡಿಲ್ಲವಾದರೂ, ರೈಲು ಕಂಪನಿ ಗ್ರಾಹಕರ ಕ್ಷಮೆ ಕೋರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ