
ದಶಕಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಒಂದೇ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಲಿದ್ದಾರೆಯೇ?
ಉಡುಪಿ ಜಿಲ್ಲೆಯ ಭಾರ್ಗವ ಬೀಡುವಿನಲ್ಲಿ ಶ್ರೀ ಬಾರ್ಕೂರು ಮಹಾಸಂಸ್ಥಾನಂ ಟ್ರಸ್ಟ್ ಆಯೋಜಿಸಿರುವ ಅಳಿಯಕಟ್ಟು ಪರಂಪರೆಯ ಸಮುದಾಯಗಳ ಶ್ರೀ ಸಂಸ್ಥಾನ ಲೋಕಾರ್ಪಣೆ ಉದ್ಘಾಟನಾ ಸಮಾರಂಭ ಶುಕ್ರವಾರ ಮಧ್ಯಾಹ್ನ 12ಕ್ಕೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದೇವೇಗೌಡ ಇಬ್ಬರಿಗೂ ಆಹ್ವಾನವಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಒಂದೇ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ಉಡುಪಿಯ ಬಾರ್ಕೂರಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯೊಂದು ಇದೆ ಎಂದು ಉನ್ನತ ಮೂಲಗಳು ಹೇಳುತ್ತವೆ.
ಆದರೆ, ಇದನ್ನು ಸಿದ್ದರಾಮಯ್ಯ ಹಾಗೂ ದೇವೇಗೌಡರ ಆಪ್ತ ಬಳಗ ನಿರಾಕರಿಸುತ್ತವೆ.
ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಒಂದೇ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ಉಡುಪಿಯ ಬಾರ್ಕೂರಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯೊಂದು ಇದೆ ಎಂದು ಉನ್ನತ ಮೂಲಗಳು ಹೇಳುತ್ತವೆ.
ಆದರೆ, ಇದನ್ನು ಸಿದ್ದರಾಮಯ್ಯ ಹಾಗೂ ದೇವೇಗೌಡರ ಆಪ್ತ ಬಳಗ ನಿರಾಕರಿಸುತ್ತವೆ. ಈ ಕಾರ್ಯಕ್ರಮಕ್ಕೆ ಇಬ್ಬರಿಗೂ ಆಹ್ವಾನವಿರುವುದು ನಿಜ. ಆದರೆ, ಇಬ್ಬರೂ ನಾಯಕರು ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ತೆರಳಲಿದ್ದಾರೆ ಎಂದು ಸಿಎಂ ಆಪ್ತ ಮೂಲ ಹೇಳಿದರೆ, ದೇವೇಗೌಡರು ಈ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಮೂಲಕ ತೆರಳುವ ಮಾಹಿತಿಯಿದೆ. ಆದರೆ, ಈ ಯೋಜನೆ ಕಡೆ ಕ್ಷಣದಲ್ಲಿ ರದ್ದಾದರೂ ರದ್ದಾಗಬಹುದು.
ಏಕೆಂದರೆ, ದೇವೇಗೌಡರು ತಮ್ಮ ಆತ್ಮಕಥೆ ರಚಿಸುತ್ತಿರುವ ಲೇಖಕರು ಹಾಗೂ ವಿದ್ವಾಂಸರೊಂದಿಗೆ ಮೈಸೂರಿನಲ್ಲಿ ಸಭೆಯೊಂದನ್ನು ಆಯೋಜಿಸಿದ್ದು, ಈ ಸಭೆಗೆ ಅವರು ತೆರಳುವ ಸಾಧ್ಯತೆ ಯೂ ಇದೆ ಎನ್ನುತ್ತವೆ. ಒಂದು ವೇಳೆ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಒಂದೇ ಹೆಲಿಕಾಪ್ಟರ್‌ನಲ್ಲಿ ತೆರಳಿದರೆ, ದಶಕಗಳ ನಂತರ ಈ ನಾಯಕರು ಇಂತಹದೊಂದು ಪ್ರಯಾಣ ಮಾಡಿದಂತಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.