ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರದ ಮತ್ತೊಂದು ದಿಟ್ಟ ನಿರ್ಧಾರ

By Web Desk  |  First Published Sep 24, 2019, 12:06 AM IST

ಕೇಂದ್ರದ ದಿಟ್ಟ ನಿರ್ಧಾರ/ ಜಮ್ಮು ಕಾಶ್ಮೀರದಲ್ಲಿ ಮುಚ್ಚಲ್ಪಟ್ಟ ದೇವಾಲಯಗಳಿಗೆ ಮರುಜೀವ/ ಶಾಲೆ, ಸಿನಿಮಾ ಮಂದಿರ ತೆರೆಯಲು ಕೇಂದ್ರ ಸರ್ಕಾರ ತೀರ್ಮಾನ


ಬೆಂಗಳೂರು [ಸೆ. 23] ಆರ್ಟಿಕಲ್ 370 ರದ್ದಾದ ನಂತರ ಕೇಂದ್ರ ಸರ್ಕಾರ ಒಂದೊಂದೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕಾಶ್ಮೀರದಲ್ಲಿ ನಾಶವಾದ ಎಲ್ಲ ದೇವಾಲಯಗಳು ಮತ್ತು ಶಾಲೆಗಳು ಮರುಸ್ಥಾಪನೆಯಾಗಲಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಿ.ಕಿಶನ್ ರೆಡ್ಡಿ ಸೋಮವಾರ ತಿಳಿಸಿದ್ದಾರೆ.

ಈ ಬಗ್ಗೆ  ಕುರಿತು ಸರ್ವೇ ನಡೆದಿದ್ದು, ಸುಮಾರು 5 ಸಾವಿರ ದೇವಾಲಯಗಳು ಪುನರ್‌ ನಿರ್ಮಾಣಗೊಳ್ಳಲಿದೆ. ಈ ಹಿಂದೆ ನಾಶಗೊಂಡ ಸಿನಿಮಾ ಮಂದಿರ ಹಾಗೂ ಶಾಲೆಗಳು ಪುನರ್‌ ನಿರ್ಮಾಣವಾಗಲಿವೆ ಎಂದು ಹೇಳಿದರು.

Tap to resize

Latest Videos

ರಾಜ್ಯದ ಪ್ರತಿ ಹಳ್ಳಿಯಿಂದ 5 ಜನರನ್ನು ಸರ್ಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸೈನ್ಯ , ನೌಕಾಪಡೆ ಮತ್ತು ವಾಯುಪಡೆಯು ಸಹ ನೇಮಕಾತಿಗೆ ಚಾಲನೆ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಕಾಶ್ಮೀರದ ಚಿತ್ರಣ ನಿಧಾನವಾಗಿ ಬದಲಾಗುತ್ತದೆ ಕೇಂದ್ರ ಸರ್ಕಾರದ ಯೋಜನೆಗಳು ಹೊಸ ಅಭಿವೃದ್ಧಿಯ ಕಡೆ ಕೊಂಡೊಯ್ಯಲಿದೆ ಎಂದು ತಿಳಿಸಿದರು.

click me!