ವಿಮಾನದಲ್ಲೇ ಶಾಲಾ ಕೊಠಡಿ.. ನಾನು ಕಲಿಯಬೇಕಿತ್ತು ಇಂಥ ಶಾಲೆಯಲ್ಲಿ

By Web DeskFirst Published Nov 27, 2018, 6:34 PM IST
Highlights

ಇದೊಂದು ಸರಕಾರಿ ಶಾಲೆ.. ಸರಕಾರಿ ಶಾಲೆ ಎಂದು ಮೂಗು ಮುರಿಯುವವರಿಗೆ ತಕ್ಕ ಉತ್ತರವನ್ನು ನೀಡುವ ಶಾಲೆ. ಈ ಶಾಲೆಯಂದರೆ ಪ್ರಸಿದ್ಧಿ ಜತೆಗೆ ಮಕ್ಕಳಿಗೆಲ್ಲ ಅಚ್ಚು ಮೆಚ್ಚು..

ಇಂದರಘಡ[ನ.27] ಭಾರತದ ಅದೆಷ್ಟೋ ಶಾಲೆಗಳಲ್ಲಿ ವ್ಯಾಸಂಗ ಮಾಡುವ  ಮಕ್ಕಳು ವಿಮಾನವನ್ನೇ ಕಂಡಿಲ್ಲ. ಆದರೆ ಈ ಮಕ್ಕಳು ವಿಮಾನದ ಒಳಗೆ ಕುಳಿತು ಕಲಿಯುತ್ತಿದ್ದಾರೆ.

ರಾಜಸ್ಥಾನದ ಇಂದಿರಾಘಡ ಶಾಲೆಯ 406 ಮಕ್ಕಳಿಗೆ ಇಂಥದ್ದೊಂದು ಭಾಗ್ಯವಿದೆ. ವಿಮಾನದ ಮಾದರಿಯ ಶಾಲಾ ಕೊಠಡಿಯಲ್ಲಿ ಕುಳಿತು ಕಲಿಯುವ ಮಕ್ಕಳು ಶಾಲಾ ಅವಧಿ ಮುಗಿದರೂ ಮನೆಗೆ ಹೋಗುವ ಮನಸ್ಸು ಮಾಡಲ್ಲ.

ಇದೊಂದು ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಸರಕಾರಿ ಇಂಜಿನಿಯರ್ ಒನ್ನರು ಮಕ್ಕಳ ಕನಸಿಗೆ ರೆಕ್ಕೆ ಬರಿಸಿದ್ದಾರೆ. ಹೊರಭಾಘದ ಜನರು ಇಲ್ಲಿಗೆ ಬಂದು ಇದನ್ನು ನೋಡಿಕೊಂಡು ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ ಎಂದು ಶಾಲೆಯ ಫ್ರಿನ್ಸಿಪಾಲ್ ಪುಷ್ಪಾ ಮೀನಾ ತಿಳಿಸುತ್ತಾರೆ.

ಮದುಮಗಳೊಬ್ಬಳು ಇಲ್ಲಿಗೆ ಬಂದು ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳಂತೆ. 6 ತಿಂಗಳ ಹಿಂದ  ಶಾಲೆ ಸರಿಯಾದ ಕಟ್ಟಡ ಇಲ್ಲದೆ ಸಮಸ್ಯೆ ಎದುರಿಸುತ್ತಿತ್ತು. ಜತೆಗೆ ಮಕ್ಕಳ ಹಾಜರಾತಿ ಪ್ರಮಾಣ ಸಹ ಇಳಿಕೆಯಾಗುತ್ತಿತ್ತು. ಈ ವಿಮಾನದ ಶಾಲಾ ಕೊಠಡಿ ಆದ ಮೇಲೆ ಎಲ್ಲ ಸಮಸ್ಯೆಗಳು ಬಗೆಹರಿದಿವೆ ಎಂದು ಪ್ರಿನ್ಸಿಪಾಲ್ ಹೇಳುತ್ತಾರೆ.
 

 

 

click me!