
ಕೊಡಗು(ನ.3): ಪ್ರವಾಸಿಗರನ್ನು ಆಕರ್ಷಣೆ ಮಾಡುವ ದುಬಾರೆ ಕಾವೇರಿ ನದಿ ತೀರದ ಜಾಗ ಈಗ ಗೊಂದಲದ ಗೂಡಾಗಿದೆ. ಗ್ರಾಮ ಪಂಚಾಯಿತಿ ಮತ್ತು ಕಾವೇರಿ ರಿವರ್ ರ್ಯಾಪ್ಟಿಂಗ್ ಮಾಲಿಕರ ನಡುವೆ ಜಾಗಕ್ಕಾಗಿ ಕಿತ್ತಾಟ ಆರಂಭವಾಗಿದೆ. ಸೋಮವಾರ ಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ಸೇರಿದ ದುಬಾರೆ ನದಿ ತೀರದಲ್ಲಿ ರ್ಯಾಫ್ಟಿಂಗ್ ಮಾಲಿಕರು ಪಂಚಾಯಿತಿಯಿಂದ ಅನುಮತಿ ಇಲ್ಲದೇ ರ್ಯಾಪ್ಟಿಂಗ್ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಇನ್ನು, ದುಬಾರೆ ನದಿ ತೀರದಲ್ಲಿ ರ್ಯಾಪ್ಟಿಂಗ್ ಗಾಗಿ ಟಿಕೇಟ್ ಕೌಂಟರ್ ತೆರೆಯಲಾಗಿದ್ದು, ಇದಕ್ಕೂ ಅನುಮತಿ ಪಡೆದಿಲ್ಲವಂತೆ. ಈ ಹಿನ್ನೆಲೆ, ಆಕ್ರೋಶಗೊಂಡ ಗ್ರಾಮ ಪಂಚಾಯ್ತಿ ಸದಸ್ಯರು ಬಲವಂತವಾಗಿ ಶೆಡ್'ಗೆ ಬೀಗ ಹಾಕಿದ್ದರು. ಆದರೂ ಮತ್ತೆ ಟಿಕೇಟ್ ಕೌಂಟರ್ ಆರಂಭ ಮಾಡಿದ್ದು ಗಲಾಟೆಗೆ ಕಾರಣವಾಗಿದೆ. ನದಿ ತೀರ ಗ್ರಾಮ ಪಂಚಾಯಿತಿಗೆ ಒಳಪಡಿಸುವುದಿಲ್ಲ. ಪ್ರವಾಸಿಗರಿಗಾಗಿ ತಾತ್ಕಲಿಕವಾಗಿ ಶೆಡ್ ಮಾಡಿಕೊಂಡಿದ್ದೇವೆ. ನಾವು ರ್ಯಾಫ್ಟಿಂಗ್ ನಡೆಸಲು ಅನುಮತಿ ಕೇಳಿದರೂ, ಪಂಚಾಯಿತಿ ಅನುಮತಿ ನೀಡಿಲ್ಲ ಎನ್ನುತ್ತಾರೆ ಮಾಲಿಕ ಸಂಘದವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.