ಸುಪ್ರೀಂಕೋರ್ಟ್ ಮುಖ್ಯ ನ್ಯಾ.ಟಿ.ಎಸ್ ಠಾಕೂರ್ ಸೇವಾವಧಿ ನಾಳೆ ಮುಕ್ತಾಯ, ವಿದಾಯ ಸಮಾರಂಭದಲ್ಲಿ ಗದ್ಗತಿತ

Published : Jan 03, 2017, 04:40 PM ISTUpdated : Apr 11, 2018, 01:00 PM IST
ಸುಪ್ರೀಂಕೋರ್ಟ್ ಮುಖ್ಯ ನ್ಯಾ.ಟಿ.ಎಸ್ ಠಾಕೂರ್ ಸೇವಾವಧಿ ನಾಳೆ ಮುಕ್ತಾಯ, ವಿದಾಯ ಸಮಾರಂಭದಲ್ಲಿ ಗದ್ಗತಿತ

ಸಾರಾಂಶ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ರವರ ಸೇವಾವಧಿ ನಾಳೆ ಮುಕ್ತಾಯಗೊಳ್ಳಲಿದ್ದು  ಇಂದು ನಡೆದ ಬೀಳ್ಕೋಡುಗೆ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೀಕ್ಷಕನಾಗಿ, ಪ್ರೇಕ್ಷಕನಾಗಿ ನ್ಯಾಯಾಂಗಕ್ಕೆ ಕೊಡುಗೆ ನೀಡುತ್ತಾ ಮುಂದುವರೆಯುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.

ಬೆಂಗಳೂರು (ಜ.03): ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ರವರ ಸೇವಾವಧಿ ನಾಳೆ ಮುಕ್ತಾಯಗೊಳ್ಳಲಿದ್ದು  ಇಂದು ನಡೆದ ಬೀಳ್ಕೋಡುಗೆ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೀಕ್ಷಕನಾಗಿ, ಪ್ರೇಕ್ಷಕನಾಗಿ ನ್ಯಾಯಾಂಗಕ್ಕೆ ಕೊಡುಗೆ ನೀಡುತ್ತಾ ಮುಂದುವರೆಯುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.

ಅವಕಾಶಗಳು ನಿಮ್ಮ ಮನೆ ಬಾಗಿಲನ್ನು ತಟ್ಟಿದಾಗ ಕಳೆದುಕೊಳ್ಳಬಾರದು. ಒಮ್ಮೆ ಕಳೆದುಕೊಂಡರೆ  ಮತ್ತೊಮ್ಮೆ ಸಿಗುವುದಿಲ್ಲವೆಂದು ಭಾವನಾತ್ಮಕವಾಗಿ ಧಾಟಿಯಲ್ಲಿ ಹೇಳಿದ್ದಾರೆ.

ಟಿ ಎಸ್ ಠಾಕೂರ್ ತಮ್ಮ ಸೇವಾವಧಿಯಲ್ಲಿ 28 ನ್ಯಾಯಾಧೀಶರ ವಿದಾಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಇಂದು ಸ್ವತಃ ಅವರ ವಿದಾಯ ಸಮಾರಂಭದಲ್ಲಿ ಗದ್ಗತಿತರಾದರು. ನೆರೆದಿದ್ದವರ ಕಣ್ಣಲ್ಲೂ ನೀರು ತುಂಬಿತ್ತು.

ಬೆಂಗಳೂರಿನಲ್ಲಿದ್ದಾಗಿನ ಸಂದರ್ಭವನ್ನು ನೆನೆಸಿಕೊಳ್ಳುತ್ತಾ, ಬೆಂಗಳೂರಿನಲ್ಲಿ 10 ವರ್ಷ ಸೇವೆ ಸಲ್ಲಿಸಿದ ಬಳಿಕ ಅಲ್ಲಿಂದ ಹೊರಟೆ. ಆಗ ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು. ಅದೇ ರೀತಿ ಇಂದು ನಿಮ್ಮೆಲ್ಲರ ಕಣ್ಣೀರು ತುಂಬಿದೆ ಎಂದು ಭಾವಾವೇಶಕ್ಕೆ ಒಳಗಾದರು.

ನ್ಯಾಯಾಂಗ ವ್ಯವಸ್ಥೆಯು ವೇಗವನ್ನು ಪಡೆದುಕೊಂಡು ತ್ವರಿತವಾಗಿ ನ್ಯಾಯ ತೀರ್ಮಾನವನ್ನು ಮುಂದಿನ ದಿನಗಳಲ್ಲಿ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!