ಕೋಟೆ ನಾಡಿನಲ್ಲಿ ಅರಳಿತು ಕಮಲ

By Web DeskFirst Published Sep 3, 2018, 4:23 PM IST
Highlights

ಕೋಟೆನಾಡಿನಲ್ಲಿ ಈ ಬಾರಿ ನಡೆದ ನಗರಸಭೆ ಹಾಗೂ ಪುರ ಸಭೆ ಚುನಾವಣೆಯಲ್ಲಿ ಕಮಲ ಪಾಳಯವು ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. 

ಚಿತ್ರದುರ್ಗ :  ಕರ್ನಾಟಕ ನಗರ ಸ್ಥಳೀಯ ಸಂಸ್ಥೆ  ಚುನಾವಣಾ ಫಲಿತಾಂಶ ಹೊರ ಬಿದ್ದಿದೆ.  ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ , ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದ ಈ ಚುನಾವಣೆಯಲ್ಲಿ ಕೆಲವೆಡೆ ನಿರೀಕ್ಷೆಯ ಫಲಿತಾಂಶ ಬಂದರೆ ಇನ್ನು ಕೆಲವೆಡೆ ಲೆಕ್ಕಾಚಾರ ಉಲ್ಟಾ ಹೊಡೆದಿದೆ. 

ಚಿತ್ರದುರ್ಗ ನಗರಸಭೆ :  ಚಿತ್ರದುರ್ಗ ನಗರಸಭೆಯ ಒಟ್ಟು  35 ವಾರ್ಡ್ಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು 5 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಇನ್ನು  6 ಸ್ಥಾನಗಳಲ್ಲಿ ಜೆಡಿಎಸ್ ಜಯಗಳಿಸಿದೆ. 

ಚಳ್ಳಕೆರೆ ನಗರಸಭೆ : ಇಲ್ಲಿ ಒಟ್ಟು  31 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ 4 ಬಿಜೆಪಿ ಪಾಲಾದರೆ  16 ಸ್ಥಾನಗಳಲ್ಲಿ ಕಾಂಗ್ರೆಸ್ ವಿಜಯಿಯಾಗಿದೆ.  10 ಸ್ಥಾನಗಳಲ್ಲಿ ಜೆಡಿಎಸ್ ಜಯ ಸಾಧಿಸಿದೆ. 

ಹೊಸದುರ್ಗ ಪುರಸಭೆ : ಒಟ್ಟು 23 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು  14ರಲ್ಲಿ ಬಿಜೆಪಿ ಜಯಗಳಿಸಿದೆ. 4ರಲ್ಲಿ ಕಾಂಗ್ರೆಸ್  ವಿಜಯಿಯಾಗಿದ್ದು ಜೆಡಿಎಸ್ ಶೂನ್ಯ ಫಲಿತಾಂಶ ದಾಖಲಿಸಿದೆ. 

ಇಲ್ಲಿ ಒಟ್ಟು 89 ಸ್ಥಾನಗಳಲ್ಲಿ ಬಿಜೆಪಿ 35 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮುನ್ನಡೆ ಕಾಯ್ದುಕೊಂಡಿದೆ. 

ಸ್ಥಳೀಯ ಸಂಸ್ಥೆ  ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್
ಚಿತ್ರದುರ್ಗ [ನಗರಸಭೆ] 35 17 5 06
ಚಳ್ಳಕೆರೆ [ನಗರಸಭೆ] 31 4 16 10
ಹೊಸದುರ್ಗ[ಪುರಸಭೆ] 23 14 4 00
ಒಟ್ಟು 89 35 25 16

 

click me!