ಗಣೇಶ ಹಬ್ಬದ ವೇಳೆ ಕೋಮು ಗಲಭೆಗೆ ಸ್ಕೆಚ್ ಹಾಕಿದ್ದವರ ಬಂಧನ

By Web DeskFirst Published 3, Sep 2018, 4:11 PM IST
Highlights

ಗಣೇಶ ಹಬ್ಬದ ವೇಳೆ ಕೋಮು ಗಲಭೆ ಉಂಟುಮಾಡಲು ಸ್ಕೆಚ್ ಹಾಕಿದ್ದ ಐವರನ್ನು ಬಂಧಿಸಲಾಗಿದೆ. ಉಗ್ರರೊಂದಿಗೂ ನಂಟು ಇಟ್ಟುಕೊಂಡಿದ್ದ ಇವರು ದಕ್ಷಿಣ ಭಾರತದಲ್ಲಿ ಕೋಮು ಗಲಭೆ ಹುಟ್ಟು ಹಾಕಲು ಯತ್ನಿಸುತ್ತಿದ್ದ ಆತಂಕಕಾರಿ ಅಂಶ ಬಹಿರಂಗವಾಗಿದೆ.

ಕೊಯಂಬತ್ತೂರು(ಸೆ.3) ಹಿಂದು ನಾಯಕರನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ಐದು ಜನರನ್ನು ಬಂಧಿಸಲಾಗಿದೆ. ತಮಿಳುನಾಡು ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಗುಪ್ತಚರ ದಳದ ಮಾಹಿತಿಯನ್ನು ಆಧರಿಸಿ ಬಂಧನ ಮಾಡಲಾಗಿದೆ.

ಇವರನ್ನು ಉಗ್ರರು ಎಂದು ಸದ್ಯಕ್ಕೆ ಕರೆಯಲು ಸಾಧ್ಯವಿಲ್ಲ ಆದರೆ ಉಗ್ರ ಸಂಘಟನೆ ಐಎಸ್ ಐಎಸ್ ಜತೆ ಸಂಪರ್ಕ ಇಟ್ಟುಕೊಂಡಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 13 ಗಣೇಶ ಚತುರ್ಥಿ ವೇಳೆ ಕೋಮು ಗಲಭೆ ಹುಟ್ಟುಹಾಕಲು ತಯಾರಿ ನಡೆಸಿದ್ದರು ಎಂಬ ಆತಂಕಕಾರಿ ಅಂಶವೂ ಬಹಿರಂಗವಾಗಿದೆ.

 

Last Updated 9, Sep 2018, 9:13 PM IST