ಚಿಂಚೋಳಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಣದಿಂದ ನಿವೃತ್ತಿ

By Web Desk  |  First Published May 13, 2019, 10:39 AM IST

ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಚಿಂಚೋಳಿಯಲ್ಲಿ ಹೊಸ ಬೆಳವಣಿಗೆಯೊಂದು ಸಂಭವಿಸಿದೆ. 


ಕಲಬುರಗಿ :  ಚಿಂಚೋಳಿ ಉಪ ಸಮರದಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯ ಶಮನವಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದ ಭಾಗ್ಯಶ್ರೀ ಸಂತೋಷ ತಳವಾರ ಅವರು ಪಕ್ಷದ ಅಧಿಕೃತ ಉಮೇದುವಾರ ಡಾ.ಅವಿನಾಶ್‌ ಜಾಧವ್‌ ಬೆಂಬಲಿಸಿ ಕಣದಿಂದ ನಿವೃತ್ತಿಯಾಗುವುದಾಗಿ ಭಾನುವಾರ ಘೋಷಿಸಿದ್ದಾರೆ.

ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌ ಈ ಬಂಡಾಯ ಶಮನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾಗ್ಯಶ್ರೀ ಪತಿ ಸಂತೋಷ್‌ ತಳವಾರ ಬಿಜೆಪಿ ಒಬಿಸಿ ಮೋರ್ಚಾ ಕಲಬುರಗಿ ಮಹಾನಗರದ ಅಧ್ಯಕ್ಷರಾಗಿದ್ದರು. ಚಿಂಚೋಳಿಯಲ್ಲಿ ಪಕ್ಷ ಡಾ.ಅವಿನಾಶ್‌ಗೆ ಟಿಕೆಟ್‌ ಘೋಷಿಸಿದ್ದನ್ನು ವಿರೋಧಿಸಿ ತಮ್ಮ ಪತ್ನಿ ಭಾಗ್ಯಶ್ರೀಯವರನ್ನೇ ಸಂತೋಷ್‌ ಕಣಕಿಳಿಸಿದ್ದರು. 

Tap to resize

Latest Videos

ಈ ಕುರಿತು ಕಳೆದ ವಾರ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದರು. ಇದೀಗ ಮಾಲೀಕಯ್ಯಾ ಗುತ್ತೇದಾರ್‌ ಈ ಬೆಳವಣಿಗೆಯನ್ನು ಶಮನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಎದುರಾಗಿದ್ದ ಅಡ್ಡಿ ನಿವಾರಿಸುವಲ್ಲಿ ಯಶ ಕಂಡಿದ್ದಾರೆ.

click me!