ಸಿಕ್ಕಿಂನಲ್ಲಿ ಹಿಮಪಾತ: ಆಹಾರ ಸಿಗದೇ 300 ಯಾಕ್‌ಗಳ ಸಾವು

By Web DeskFirst Published May 13, 2019, 9:55 AM IST
Highlights

ಸಿಕ್ಕಿಂನಲ್ಲಿ ನಿರಂತರ ಹಿಮಪಾತ: ಆಹಾರ ಸಿಗದೇ ಹಸಿವಿನಿಂದ ಬಳಲಿ 300 ಯಾಕ್‌ಗಳ ಸಾವು| ಮುಕುಥಾಂಗ್‌ ವಲಯದಲ್ಲಿ ಸುಮಾರು 250 ಹಾಗೂ ಯುಮ್ತಾಂಗ್‌ ವಲಯದಲ್ಲಿ ಸುಮಾರು 50 ಯಾಕ್‌ಗಳ ಮೃತದೇಹಗಳು ಪತ್ತೆ

ಗ್ಯಾಂಗ್ಟಕ್‌[ಮೇ.13]: ಕಳೆದ ಡಿಸೆಂಬರ್‌ನಿಂದ ಸುರಿಯುತ್ತಿರುವ ವಿಪರೀತ ಹಿಮಪಾತದಿಂದಾಗಿ ಆಹಾರ ಸಿಗದೇ ಸುಮಾರು 300ಕ್ಕೂ ಹೆಚ್ಚು ಯಾಕ್‌ (ಹಿಮಪರ್ವತಗಳಲ್ಲಿರುವ ಪ್ರಾಣಿ)ಗಳು ಸಾವನ್ನಪ್ಪಿರುವ ಧಾರುಣ ಘಟನೆ ಉತ್ತರ ಸಿಕ್ಕಿಂನಲ್ಲಿ ವರದಿಯಾಗಿದೆ. ಮುಕುಥಾಂಗ್‌ ವಲಯದಲ್ಲಿ ಸುಮಾರು 250 ಹಾಗೂ ಯುಮ್ತಾಂಗ್‌ ವಲಯದಲ್ಲಿ ಸುಮಾರು 50 ಯಾಕ್‌ಗಳ ಮೃತದೇಹಗಳು ಪತ್ತೆಯಾಗಿವೆ.

ಪಶು ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದಾಗ ಹಸಿವಿನಿಂದ ಮೃತಪಟ್ಟವರದಿ ಲಭ್ಯವಾಗಿದೆ. 2018ರ ಡಿಸೆಂಬರ್‌ನಿಂದ ನಿರಂತರವಾಗಿ ಹಿಮಪಾತ ಆಗುತ್ತಿರುವ ಪರಿಣಾಮ ಯಾಕ್‌ಗಳಿಗೆ ಆಹಾರದ ಕೊರತೆ ಎದುರಾಗಿದೆ. ಇದೀಗ ಪಶು ಇಲಾಖೆ ಮೂಲಕ ಯಾಕ್‌ಗಳಿಗೆ ಆಹಾರ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ.

ಇನ್ನು ಸಾವನ್ನಪ್ಪಿದ ಯಾಕ್‌ಗಳನ್ನು ನಿರ್ವಹಿಸುತ್ತಿದ್ದ ಕುಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಉತ್ತರ ಸಿಕ್ಕಿಂ ಜಿಲ್ಲಾದಿಕಾರಿ ರಾಜ್‌ ಯಾದವ್‌ ತಿಳಿಸಿದ್ದಾರೆ.

click me!