ಲಂಡನ್‌ನಲ್ಲಿ ಕಾಫಿ ಕುಡಿದು ಬಸ್ ಓಡುತ್ತೆ!

By Suvarna Web DeskFirst Published Nov 21, 2017, 7:43 PM IST
Highlights
  • ಕಾಫಿ ಬೀಜದ ತ್ಯಾಜ್ಯದಿಂದ ಇಂಧನ ತಯಾರಿ
  • ವಿಶ್ವದಲ್ಲೇ ಮೊದಲ ಬಾರಿಗೆ ಯಶಸ್ವಿ ಪ್ರಯೋಗ

ಲಂಡನ್: ಮನಸ್ಸಿಗೆ ಉಲ್ಲಾಸ ನೀಡಲು ನಾವೆಲ್ಲಾ ಕಾಫಿ ಕುಡಿಯುವುದು ಗೊತ್ತು. ಆದರೆ ಲಂಡನ್‌ನಲ್ಲಿ ಇದೀಗ  ಬಸ್‌ಗಳೂ ಕಾಫಿ ಕುಡಿಯಲು ಆರಂಭಿಸಿವೆ.  ಅಷ್ಟೇ ಏಕೆ, ಕಾಫಿ ಕುಡಿದು ಓಡಲು ಶುರು ಮಾಡಿವೆ!

ಹೌದು. ಕಾಫಿ ಬೀಜದ ತ್ಯಾಜ್ಯಗಳಿಂದ ಜೈವಿಕ ಇಂಧನ ತಯಾರಿಸಿ ಅದರಿಂದ ಬಸ್‌ಗಳನ್ನು ಓಡಿಸುವ ಪ್ರಯೋಗವನ್ನು ಮೊದಲ ಬಾರಿಗೆ ಲಂಡನ್‌ನಲ್ಲಿ ಕೈಗೊಳ್ಳಲಾಗಿದೆ. ಕಾಫಿ ತ್ಯಾಜ್ಯದಿಂದ ದೊರೆತ ಕಚ್ಚಾತೈಲವನ್ನು ಡೀಸೆಲ್‌ನೊಂದಿಗೆ ಬೆರೆಸಿ ಬಸ್‌ಗಳಿಗೆ ಇಂಧನವಾಗಿ ಸೋಮವಾರದಿಂದ ಬಳಸಲಾಗುತ್ತಿದೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಿಂದ ಟ್ರಾನ್ಸಪೋರ್ಟ್ ಫಾರ್ ಲಂಡನ್ ಬಯೋ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದೆ. ಕಾಫಿ ತ್ಯಾಜ್ಯದಿಂದ ತಯಾರಾದ ಬಯೋ ಇಂಧನವನ್ನು ಸಾರಿಗೆ ವ್ಯವಸ್ಥೆಗೆ ಬಳಸಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಲಂಡನ್‌ನಲ್ಲಿ ವರ್ಷಕ್ಕೆ 2 ಲಕ್ಷ ಟನ್ ಕಾಫಿ ತಾಜ್ಯ ಉತ್ಪಾದನೆಯಾಗುತ್ತದೆ. ಇದನ್ನು ಬಳಸಿ ಒಂದು ವರ್ಷ ಬಸ್ ಓಡಿಸಲು ಬೇಕಾದಷ್ಟು ಕಾಫಿ ಇಂಧನವನ್ನು ಉತ್ಪಾದಿಸಿದ್ದಾಗಿ ತಂತ್ರಜ್ಞಾನ ಸಂಸ್ಥೆ ಬಯೋಬೀನ್ ಹೇಳಿದೆ.

ಕಾಫಿ ಶಾಪ್‌ಗಳು ಮತ್ತು ಕಾಫಿ ಫ್ಯಾಕ್ಟರಿಗಳು ಬಳಸಿದ ಕಾಫಿ ಬೀಜದ ತ್ಯಾಜ್ಯಗಳನ್ನು ಬಳಸಿಕೊಂಡು ಬಯೋ ಬೀನ್ ಕಂಪನಿ ಅದರಿಂದ ತೈಲವನ್ನು ತಯಾರಿಸಲಿದೆ. ಬಳಿಕ ಅದನ್ನು ಸಂಸ್ಕರಿಸಿ ಬಯೋ ಇಂಧನದೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಯಾವುದೇ ಮಾರ್ಪಾಡಿಲ್ಲದೇ ಬಸ್‌ಗಳಿಗೆ ಈ ಇಂಧನವನ್ನು ಬಳಸಬಹುದಾಗಿದೆ.

click me!