ರಾಷ್ಟ್ರಪತಿ ಅರುಣಾಚಲ ಭೇಟಿಗೆ ಚೀನಾ ಗರಂ: ಸಂಬಂಧ ಧಕ್ಕೆ ಆರೋಪ

By Suvarna Web DeskFirst Published Nov 21, 2017, 6:51 PM IST
Highlights

ಅರುಣಾಚಲ ಪ್ರದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ನೀಡಿ ದ್ದಕ್ಕೆ ಚೀನಾ ಪ್ರಬಲವಾಗಿ ಆಕ್ಷೇಪಿಸಿದೆ. ದ್ವಿಪಕ್ಷೀಯ ಸಂಬಂಧದ ನಿರ್ಣಾಯಕ ಹಂತದಲ್ಲಿ ಭಾರತವು ಗಡಿ ವಿವಾದವನ್ನು ಜಟಿಲಗೊಳಿಸಬಾರದುಎಂದು ಚೀನಾ ಹೇಳಿದೆ.

ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ನೀಡಿ ದ್ದಕ್ಕೆ ಚೀನಾ ಪ್ರಬಲವಾಗಿ ಆಕ್ಷೇಪಿಸಿದೆ. ದ್ವಿಪಕ್ಷೀಯ ಸಂಬಂಧದ ನಿರ್ಣಾಯಕ ಹಂತದಲ್ಲಿ ಭಾರತವು ಗಡಿ ವಿವಾದವನ್ನು ಜಟಿಲಗೊಳಿಸಬಾರದುಎಂದು ಚೀನಾ ಹೇಳಿದೆ.

ಆದರೆ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು, ರಾಷ್ಟ್ರದ ನೇತಾರರು ಇತರೆ ಪ್ರದೇಶಗಳಿಗೆ ಭೇಟಿ ನೀಡಿದಂತೆಯೇ ಮುಕ್ತವಾಗಿ ಭೇಟಿ ನೀಡಿದ್ದಾರೆ.

ಇದರಲ್ಲಿ ಹೆಚ್ಚಿನ ವಿಶೇಷತೆ ಏನೂ ಇಲ್ಲ ಎಂದು ಭಾರತ ಹೇಳಿದೆ. ಈ ಮೂಲಕ ಅರುಣಾಚಲ ದಕ್ಷಿಣದ ಟಿಬೆಟ್ ಎಂದು ಪ್ರತಿಪಾದಿಸುವ ಚೀನಾ ವಾದವನ್ನು ಭಾರತ ಅಲ್ಲಗೆಳೆದಿದೆ.

 

click me!