ಸುಖೋಯ್‌ ನಾಪತ್ತೆ ಹಿಂದೆ ಚೀನಾ ಕೈವಾಡ?

By Suvarna Web DeskFirst Published May 25, 2017, 11:12 AM IST
Highlights

ಈ ನಡುವೆ ವಿಮಾನ ಭಾರತ- ಚೀನಾ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲೇ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇಡೀ ಘಟನೆಯ ಹಿಂದೆ ಚೀನಾ ಕೈವಾಡದ ಶಂಕೆಯೂ ವ್ಯಕ್ತವಾಗಿದೆ. ಬುಧವಾರ ಸುದ್ದಿಗಾರರು ಈ ಕುರಿತು ಕೇಳಿದ ಪ್ರಶ್ನೆಗೆ ‘ನೀವು ಹೇಳಿದಂತಹ ಪರಿಸ್ಥಿತಿಗೆ ಸಂಬಂಧಿಸಿದ ಸೂಕ್ತ ಮಾಹಿತಿ ಸದ್ಯಕ್ಕೆ ನನ್ನ ಬಳಿಯಿಲ್ಲ' ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲೂ ಕಾಂಗ್‌ ಹೇಳಿದ್ದಾರೆ.

ಬೀಜಿಂಗ್‌: ಮಂಗಳವಾರ ಸಾಮಾನ್ಯ ಹಾರಾಟದ ವೇಳೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್‌ ಯುದ್ಧ ವಿಮಾನದ ಕುರಿತು ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ.

ಈ ನಡುವೆ ವಿಮಾನ ಭಾರತ- ಚೀನಾ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲೇ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇಡೀ ಘಟನೆಯ ಹಿಂದೆ ಚೀನಾ ಕೈವಾಡದ ಶಂಕೆಯೂ ವ್ಯಕ್ತವಾಗಿದೆ. ಬುಧವಾರ ಸುದ್ದಿಗಾರರು ಈ ಕುರಿತು ಕೇಳಿದ ಪ್ರಶ್ನೆಗೆ ‘ನೀವು ಹೇಳಿದಂತಹ ಪರಿಸ್ಥಿತಿಗೆ ಸಂಬಂಧಿಸಿದ ಸೂಕ್ತ ಮಾಹಿತಿ ಸದ್ಯಕ್ಕೆ ನನ್ನ ಬಳಿಯಿಲ್ಲ' ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲೂ ಕಾಂಗ್‌ ಹೇಳಿದ್ದಾರೆ.

ಅಸ್ಸಾಂನ ತೇಜ್‌ಪುರ ನೆಲೆಯಿಂದ ಹಾರಾಟ ಆರಂಭಿಸಿದ್ದ ತರಬೇತಿ ವಿಮಾನದ ಪತ್ತೆಗಾಗಿ ಭಾರತಕ್ಕೆ ಚೀನಾ ನೆರವು ನೀಡುತ್ತಿದೆಯೇ? ಎಂದು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.

ಇದೇ ವೇಳೆ ‘ದಕ್ಷಿಣ ಟಿಬೆಟ್‌ (ಅರುಣಾಚಲ ಪ್ರದೇಶ)ದ ಪರಿಸ್ಥಿತಿಗಳ ಬಗ್ಗೆ ನಾವು ನಿಗಾವಿರಿಸಿದ್ದೇವೆ' ಎಂದಷ್ಟೇ ಅವರು ತಿಳಿಸಿದರು. ಕಾಣೆಯಾಗುವುದಕ್ಕೂ ಮೊದಲು ಈ ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸಿತ್ತು ಎಂಬ ವರದಿಗಳನ್ನು ಉಲ್ಲೇಖಿಸಿ ಅವರು ಮಾತನಾಡಿದರು.

(ಸಾಂದರ್ಭಿಕ ಚಿತ್ರ)

click me!