ಉತ್ತರ ಕೊರಿಯಾ'ಗೆ ಶಾಕ್ ನೀಡಿದ ಚೀನಾ

Published : Aug 14, 2017, 06:46 PM ISTUpdated : Apr 11, 2018, 12:53 PM IST
ಉತ್ತರ ಕೊರಿಯಾ'ಗೆ ಶಾಕ್ ನೀಡಿದ ಚೀನಾ

ಸಾರಾಂಶ

ತನ್ನ ಮಿತ್ರರಾಷ್ಟ್ರದ ಉತ್ಪನ್ನಗಳಾದ ಕಲ್ಲಿದ್ದಲು, ಕಬ್ಬಿಣ, ಸೀಸ, ಸಮುದ್ರಾಹಾರದ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಅಮೆರಿಕಾದ ಜೊತೆ ಯುದ್ಧೋತ್ಸಾಹದಲ್ಲಿದ್ದ ರಾಷ್ಟ್ರಕ್ಕೆ ಒಂದು ರೀತಿಯಲ್ಲಿ ಪರೋಕ್ಷ ಎಚ್ಚರಿಕೆ ನೀಡಿದೆ.   

ಬೀಜಿಂಗ್(ಆ.14): ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತರ ಕೊರಿಯಾ'ಕ್ಕೆ ಸದಾ ಬೆಂಬಲ ನೀಡುತ್ತಾ ಬಂದಿರುವ ಮಿತ್ರ ರಾಷ್ಟ್ರ ಚೀನಾ ಹಠಾತ್'ಗಿ ಶಾಕ್ ನೀಡಿದೆ.

ತನ್ನ ಮಿತ್ರರಾಷ್ಟ್ರದ ಉತ್ಪನ್ನಗಳಾದ ಕಲ್ಲಿದ್ದಲು, ಕಬ್ಬಿಣ, ಸೀಸ, ಸಮುದ್ರಾಹಾರದ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಅಮೆರಿಕಾದ ಜೊತೆ ಯುದ್ಧೋತ್ಸಾಹದಲ್ಲಿದ್ದ ರಾಷ್ಟ್ರಕ್ಕೆ ಒಂದು ರೀತಿಯಲ್ಲಿ ಪರೋಕ್ಷ ಎಚ್ಚರಿಕೆ ನೀಡಿದೆ.   

ಆಗಸ್ಟ್ 5 ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ನಿರ್ಬಂಧಗಳಿಗೆ ಅನುಗುಣವಾಗಿ  ಅಧಿಕೃತ ಆಮದುಗಳನ್ನು ಹೊರತುಪಡಿಸಿ ಸೆಪ್ಟಂಬರ್ 5ರವರೆಗೆ ನಿಷೇಧಿಸಲಾಗಿದೆ. ಚೀನಾವೂ ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿದ್ದು, ತನ್ನ ವಿಟೋ ಅಧಿಕಾರ ಬಳಸಿ ಉತ್ತರ ಕೊರಿಯಾ ಉತ್ಪನ್ನಗಳನ್ನು ನಿಷೇಧಿಸಿದೆ.

ಈ ನಿಷೇಧವೂ ವಿಶ್ವಸಂಸ್ಥೆಯ ಬಧ್ರತಾ ಮಂಡಳಿಯ ಅನುಮೋದನೆಯಿಂದ ಉತ್ತರ ಕೊರಿಯಾ ಬಂದರಾದ ರಾಸೊನ್ ಮೂಲಕ ಆಮದಾಗುವ ಮೂರನೇ ರಾಷ್ಟ್ರಗಳಿಂದ ಬರುವ ಉತ್ಪನ್ನಗಳನ್ನು ಹೊರತುಪಡಿಸುತ್ತದೆ. ಅಮೆರಿಕಾ ಹಾಗೂ ಉತ್ತರ ಕೊರಿಯಾ ನಡುವೆ ನಡೆಯುತ್ತಿರುವ ಶೀತಲ ಸಮರದ ಹಿನ್ನಲೆಯಲ್ಲಿ ಈ ನಿಷೇಧ ಹೆಚ್ಚು ಮಹತ್ವ ಪಡೆದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಡಗಿನಲ್ಲಿ ಗನ್ನಿಗೆ ದೈವತ್ವ: ಕೋವಿಗೂ ಪೂಜೆ ಮಾಡಿ ಮೆರವಣಿಗೆ ಸಲ್ಲಿಸಿದ ಕೊಡವರು!
ಬೆಂಗಳೂರು ಪಶ್ಚಿಮದಲ್ಲಿ 2.76 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಗುರಿ! ಡಿ.21ರಿಂದ ಲಸಿಕೆ ಆರಂಭ