
ಬಿಜಿಂಗ್(ಏ.26): ತನ್ನ ಮಹತ್ವಾಕಾಂಕ್ಷಿ ಯೋಜನೆ ಬೆಲ್ಟ್ ರೋಡ್‌ನ ಎರಡನೇ ಸಮಾವೇಶಕ್ಕೆ ಚೀನಾ ಸಿದ್ಧತೆ ನಡೆಸುತ್ತಿದೆ. ಆದರೆ ಭಾರತ ಈ ಬಾರಿಯೂ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಖಡಕ್ ಸಂದೇಶ ಕಳುಹಿಸಿದೆ.
ಆದರೆ ಹೇಗಾದರೂ ಮಾಡಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ಮನವೊಲಿಸುತ್ತಿರುವ ಚೀನಾ, ಇದಕ್ಕಾಗಿ ಈ ಹಿಂದೆಂದೂ ಊಹಿಸಿರದ ನಿರ್ಧಾರಕ್ಕೆ ಚೀನಾ ಬಂದಿದೆ.
ಬೆಲ್ಟ್ ರೋಡ್‌ಗಾಗಿ ಭಾರತದ ಸಹಾಯ ಬೇಡುತ್ತಿರುವ ಚೀನಾ, ಇಷ್ಟು ದಿನ ಅರುಣಾಚಲ ಪ್ರದೇಶಕ್ಕಾಗಿ ಹಕ್ಕು ಸಾಧಿಸುವ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟಿದೆ. ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರವನ್ನೂ ಸೇರಿ ಸಂಪೂರ್ಣ ಕಾಶ್ಮೀರ ಭಾರತದ್ದು ಎಂದು ಹೇಳಿದೆ.
ಬೆಲ್ಟ್ ರೋಡ್ ಸಮಾವೇಶಕ್ಕಾಗಿ ಯೋಜನೆಯ ಹೊಸ ನಕ್ಷೆ ಬಿಡುಗಡೆ ಮಾಡಿರುವ ಚೀನಾ, ಇದರಲ್ಲಿ ಅರುಣಾಚಲ ಪ್ರದೇಶ ಮತ್ತು ಸಂಪೂರ್ಣ ಕಾಶ್ಮಿರವನ್ನು ಭಾರತದ ಭೂಭಾಗ ಎಂದು ಗುರುತಿಸಿದೆ.
ಭಾರತದ ಪ್ರಧಾನಿ ಸೇರಿದಂತೆ ಯಾವುದೇ ಪ್ರಮುಖ ರಾಜಕೀಯ ನಾಯಕರು ಅರುಣಾಚಲ ಪ್ರದೇಶಕ್ಕೆ ಕಾಲಿಟ್ಟರೆ ಸಾಕು ಹೂಂಕರಿಸುತ್ತಿದ್ದ ಡ್ರ್ಯಾಗನ್, ಇದೀಗ ಬೆಲ್ಟ್ ರೋಡ್ ಯೋಜನೆಗೆ ಭಾರತದ ಸಹಾಯ ಬೇಕೆಂದು ಅರಿತು ಅರುಣಾಚಲ ಪ್ರದಶವನ್ನು ಭಾರತದ ಭೂಭಾಗ ಎಂದು ಹೇಳಿರುವುದು ನಿಜಕ್ಕೂ ಭಾರತದ ವಾದಕ್ಕೆ ಸಂದ ಜಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.