ಬಡವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುವವರ ಅಸಲಿ ಆಟ ಈಗ ಬಯಲಾಗಿದೆ. ರಸ್ತೆ ಕಾಮಗಾರಿಗೆ ಕರಿಕಲ್ಲಿನ ಜಲ್ಲಿ ಕಲ್ಲು ಒಡೆಸಲು ಬಡವರನ್ನು ಬಳಸಿಕೊಂಡಿದ್ದಾನೆ. ಈ ಕೆಲಸದ ಮೇಲುಸ್ತುವಾರಿ ನೋಡಿಕೊಳ್ತಿರುವ ಈತನ ಹೆಸ್ರು ಪ್ರಭು ಅಂತ ಬೀದರ್ ಜಿಲ್ಲೆಯ ಮುಸ್ತಾಪೂರ ಗ್ರಾಮದ ಹೊರ ವಲಯದಲ್ಲಿ ಪ್ರಭು ಪ್ರಲಾಪ ಜೋರಾಗಿದ್ದು ಮಕ್ಕಳಿಗೆ 100 ರೂಪಾಯಿ ದೊಡ್ಡವರಿಗೆ 200 ರುಪಾಯಿ ಈತ ಕೂಲಿ ಕೊಡುತ್ತಾನಂತೆ.
ಬೀದರ್(ಫೆ.06): ಬಡವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುವವರ ಅಸಲಿ ಆಟ ಈಗ ಬಯಲಾಗಿದೆ. ರಸ್ತೆ ಕಾಮಗಾರಿಗೆ ಕರಿಕಲ್ಲಿನ ಜಲ್ಲಿ ಕಲ್ಲು ಒಡೆಸಲು ಬಡವರನ್ನು ಬಳಸಿಕೊಂಡಿದ್ದಾನೆ. ಈ ಕೆಲಸದ ಮೇಲುಸ್ತುವಾರಿ ನೋಡಿಕೊಳ್ತಿರುವ ಈತನ ಹೆಸ್ರು ಪ್ರಭು ಅಂತ ಬೀದರ್ ಜಿಲ್ಲೆಯ ಮುಸ್ತಾಪೂರ ಗ್ರಾಮದ ಹೊರ ವಲಯದಲ್ಲಿ ಪ್ರಭು ಪ್ರಲಾಪ ಜೋರಾಗಿದ್ದು ಮಕ್ಕಳಿಗೆ 100 ರೂಪಾಯಿ ದೊಡ್ಡವರಿಗೆ 200 ರುಪಾಯಿ ಈತ ಕೂಲಿ ಕೊಡುತ್ತಾನಂತೆ.
ಇಲ್ಲಿ ಕ್ರಷರ್'ಗಳ ಸಂಖ್ಯೆ ಜಾಸ್ತಿ, ಆದರೆ ದುಬಾರಿ ಬೆಲೆ. ಹೀಗಾಗಿ ಕಡಿಮೆ ಬೆಲೆಗೆ ಸಿಗೋ ಕೂಲಿಗಳನ್ನು ಬಳಸಿಕೊಂಡು ಪ್ರಭು ರೀತಿಯ ಮನುಷ್ಯರು ಜೇಬು ತುಂಬಿಸಿಳ್ಳುತ್ತಿದ್ದಾರೆ. ದುರಂತ ಅಂದರೆ ಸುಮಾರು 50ಕ್ಕೂ ಹೆಚ್ಚು ಜನರಿರುವ ಈ ಕರಿಕಲ್ಲು ಗಣಿಗಾರಿಕೆಯಲ್ಲಿ 10ಕ್ಕೂ ಅಧಿಕ ಕಂದಮ್ಮಗಳು ಕೆಲಸ ಮಾಡುತ್ತಿದ್ದಾರೆ.
ಒಟ್ಟನಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಮಾನವ ಹಕ್ಕುಗಳ ನಿಯಮಗಳ ಉಲ್ಲಂಘನೆಯಾಗಿದೆ. ಮನುಷ್ಯರನ್ನು ಜೀತದಂತೆ ಬಳಸಿಕೊಳ್ಳಲಾಗುತ್ತಿದೆ. ಕುಬೇರರಾಗಲು ಅಡ್ಡದಾರಿ ಹಿಡಿದಿರುವ ಇಂತಹ ಖದೀಮರಿಗೆ ಬುದ್ಧಿ ಕಲಿಸಲು ಸಂಬಂಧಪಟ್ಟ ಇಲಾಖಾ ಸಿಬ್ಬಂದಿ ಮುಂದಾಗಬೇಕಿದೆ.