
ಬೆಂಗಳೂರು(ಸೆ.01): ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಯಾ ಬೇಸತ್ತಿದ್ದಾರೆಯೇ? ತೀವ್ರ ಅಸಮಾಧಾನಗೊಂಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರ ಸೇವೆಗೆ ಮರಳಲು ಚಿಂತನೆ ನಡೆಸಿದ್ದಾರಾ? ಸಿಎಂ ಆಪ್ತರ ಒತ್ತಡವೇ ಮುಖ್ಯ ಕಾರ್ಯದರ್ಶಿಗಳ ಅತೃಪ್ತಿಗೆ ಕಾರಣವಾ? ಅಧಿಕಾರಿಗಳ ಅಸಮರ್ಪಕ ಎತ್ತಂಗಡಿಗೆ ಬೇಸತ್ತಿದ್ದಾರಾ ಖುಂಟಿಯಾ? ರಾಜ್ಯ ಸರ್ಕಾರದ ಧೋರಣೆಗೆ ಅಸಮಾಧಾನಗೊಂಡರಾ ಸುಭಾಷ್ಚಂದ್ರ? ಸುವರ್ಣನ್ಯೂಸ್ನ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಸಿಎಂ ಆಪ್ತರ ಒತ್ತಡ, ಅಧಿಕಾರಿಗಳ ಅಸಮರ್ಪಕ ಎತ್ತಂಗಡಿ ಹಾಗೂ ರಾಜ್ಯ ಸರ್ಕಾರದ ಈ ಮಾದರಿ ಧೋರಣೆಗಳಿಂದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ಚಂದ್ರ ಖುಂಟಿಯಾ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಈ ಪೈಕಿ, ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವ ಗೃಹ ಇಲಾಖೆಯ ಪ್ರಮುಖ ಹುದ್ದೆಯಲ್ಲಿರುವ ನಿವೃತ್ತ ಅಧಿಕಾರಿಯೊಬ್ಬರ ಹಸ್ತಕ್ಷೇಪ ಕೂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಇತ್ತೀಚಿಗೆ ನಡೆದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವೇಳೆ ಬೇಕಾಬಿಟ್ಟಿ ಎತ್ತಂಗಡಿ ಮಾಡಿರುವುದರ ಬಗ್ಗೆ ಕೆಲ ಹಿರಿಯ ಅಧಿಕಾರಿಗಳೇ ಮುಖ್ಯಕಾರ್ಯದರ್ಶಿಗಳ ಬಳಿ ಅಲವತ್ತುಕೊಂಡಿದ್ದಾರೆ. ಆದರೆ ಅಸಹಾಯಕ ಸ್ಥಿತಿ ಎದುರಿಸಿದ ಹಿನ್ನಲೆಯಲ್ಲಿ ಸುಭಾಷ್ ಚಂದ್ರ ಖುಂಟಿಯಾ ಕೇಂದ್ರ ಸೇವೆಗೆ ಮರಳುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಧೋರಣೆಯಿಂದ ಮುಖ್ಯಕಾರ್ಯದರ್ಶಿಗಳೇ ಸ್ವತಃ ಬೇಸತ್ತಿದ್ದಾರೆ ಅನ್ನೋ ಸೂಚನೆಯನ್ನಂತೂ ರವಾನಿಸುತ್ತಿವೆ. ಹೀಗೆ ಮುಂದುವರಿದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ತೊರೆದು ಸುಭಾಷ್ ಚಂದ್ರ ಖುಂಟಿಯಾ ಕೇಂದ್ರ ಸೇವೆಗೆ ಮರಳಿದರೂ ಅಚ್ಚರಿ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.